ಬಂಟ್ವಾಳ: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಜಲೀಲ್ ಹತ್ಯೆಯಿಂದ ತೆರವಾಗಿದ್ದ ಕರೋಪಾಡಿ ಪಂಚಾಯತ್ ನ ಒಂದು ಸ್ಥಾನಕ್ಕೆ ಭಾನುವಾರ ಉಪಚುನಾವಣೆ ನಡೆದಿದ್ದು,ಶೇ.80.69 ರಷ್ಟು ಮತದಾನವಾಗಿದೆ ಎಂದು ತಾಲೂಕು ಚುನಾವಣಾಧಿಕಾರಿಯಾದ ತಹಶೀಲಾದರರ ಪ್ರಕಟಣೆ ತಿಳಿಸಿದೆ.
517 ಪುರುಷ ಮತದಾರರ ಪೈಕಿ 400 ಮಂದಿ ಹಾಗೂ 462 ಮಹಿಳಾ ಮತದಾರರ ಪೈಕಿ 390 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.ಜಲೀಲ್ ಸಹೋದರ ಅನ್ಸಾರ್ ಕರೋಪಾಡಿ ಮತ್ತು ಹರೀಶ ಭಟ್ ಕೋಡ್ಲು ರವರ ಮಧ್ಯೆ ನೇರ ಹಣಾಹಣಿ ನಡೆದಿದೆ. ಮಿತ್ತನಡ್ಕ ಸರಕಾರಿ ಶಾಲೆಯಲ್ಲಿ ಮತದಾನ ನಡೆದಿತ್ತು.ಬಿಗು ಪೊಲೀಸ್ ಬಂದ ಬಸ್ತು ಏರ್ಪಡಿಸಲಾಗಿತ್ತು.ಜು .೫ ರಂದು ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಮತೆಣಿಕೆ ನಡೆಯಲಿದೆ
