ಬಂಟ್ವಾಳ: ತಾಲೂಕಿನಲ್ಲಿ ಮುಂಜಾಗ್ರತಾಕ್ರಮವಾಗಿ ತಿಂಗಳ ಹಿಂದೆ ಜಾರಿಗೊಳಿಸಲಾಗಿದ್ದ ಸೆ.೧೪೪ ನಿಷೇದಾಜ್ಙೆಯನ್ನು ಜೂ.೩೦ ರವರೆಗೆ ಮತ್ತೆ ವಿಸ್ತರಿಸಿ ಜಿಲ್ಲಾಧಿಕಾರಿಯವರು ಮಂಗಳವಾರ ಆದೇಶಿಸಿದ್ದಾರೆ.ಹಾಗೆಯೇ ಪಕ್ಕದ ಪುತ್ತೂರು,ಬೆಳ್ತಂಗಡಿ,ಸುಳ್ಯ ತಾಲೂಕಿನಲ್ಲೂ ಕೂಡ ನಿಷೇದಾಜ್ಜೆಯನ್ನು ಜೂ.೩೦ ರವರೆಗೆ ಮಿಂದುವರಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಸೆ.೧೪೪ನಿಷೇದಾಜ್ಙೆಯನ್ನು ಇದೇ ಮಾದಲ ಬಾರಿಗೆ ಒಂದು ತಿಂಗಳಿಗಿಂತಲೂ ಅಧಿಕವಾಗಿ ಜಾರಿಗೊಳಿಸಿದ ಹೊಸ ದಾಖಲೆ ಬರೆದಂತಾಗಿದೆ.11

ಜೊತೆಗೆಪೊಲೀಸ್ ಸರ್ಪಗಾವಲನ್ನು ಕೂಡ ಮುಂದುವರಿಸಲಾಗಿದೆ. ಮೂರ್ನಾಲ್ಕು ದಿನಗಳಿಂದ ತಾಲೂಕಿನಲ್ಲಿ ಪರಿಸ್ಥಿತಿ ಸಂಪೂರ್ಣ ಸಹಜಸ್ಥಿತಿಯಲ್ಲಿದೆ. ಶ್ರಮಿಕ ವರ್ಗ ಎಂದಿನಂತೆ ತಮ್ಮ ಕಾಯಕದಲ್ಲಿ ತೊಡಗಿದ್ದರೆ.ವ್ಯವಹಾರಸ್ಥರು ತಮ್ಮ ದೈನಂದಿನ ವ್ಯವಹಾರದಲ್ಲಿ ನಿರತಾಗಿದ್ದು,ಜನಸಾಮಾನ್ಯರು ಶಾಂತಿ-ನೆಮ್ಮದಿಯ ಬದುಕಿನಲ್ಲಿದ್ದಾರೆ.ಇತ್ತ ಪೊಲೀಸ್ ಇಲಾಖೆ ದುಷ್ಕರ್ಮಿಗಳ ಪುಂಡಾಟಿಕೆಗೆ ಮೂಗುದಾರ ಹಾಕಿಯೇ ವಿರಮಿಸುವ ತೀರ್ಮಾನಕ್ಕೆ ಬಂದಂತಿದೆ.ತಾಲೂಕಿನ ಕಲ್ಲಡ್ಕ,ಕನ್ಯಾನ,ಮೆಲ್ಕಾರ್,ತುಂಬೆ ಮೊದಲಾದೆಡೆ ನಡೆದ ಹಲ್ಲೆ ಪ್ರಕರಣಗಳ,ಬೆಂಜನಪದವಿನಲ್ಲಿ ರಿಕ್ಷಾ ಚಾಲಕನ ಹತ್ಯೆ ಯಿಂದ ಪ್ರಕ್ಷುಬ್ದ ವಾತಾವರಣ ನೆಲೆಸಿತ್ತು. ಅದರಲ್ಲೂ ಕಲ್ಲಡ್ಕದಲ್ಲಾದ ಇಬ್ಬರ ವಯಕ್ತಿಕ ಜಗಳಕ್ಕೆ ಕೋಮು ಬಣ್ಣ ಹಚ್ಚಿದ ಆರೋಪ ವ್ಯಕ್ತವಾಗಿತ್ತು.

ಮೇ.೨೬ ರಂದು ನಡೆದ ಘಟನೆಯ ಬಳಿಕ ಜಿಲ್ಲಾಡಳಿತ ನಿಷೇದಾಜ್ಜೆ ಜಾರಿಗೆ ತೀರ್ಮಾನಿಸಿ ಮರುದಿನದಿಂದ ಅಂದರೆ ಮೇ.೨೭ರಿಂದ ಸೆ.144 ನಿಷೇದಾಜ್ಙೆ ಜಾರಿಗೊಳಿಸಲಾಗಿತ್ತು.ತದನಂತರ ಪರಿಸ್ಥಿತಿ ತಿಳಿಯಾಗಿತ್ತಾದರೂ ಅತಂಕ ಕಡಿಮೆಯಾಗಿಲ್ಲ ಎಂಬ ಹಿನ್ನಲೆಯಲ್ಲಿ ಮೇ,೧೬ರವರೆಗೆ ಮುಂದುವರಿಸಲಾಗಿತ್ತು. ನಿಷೇದಾಜ್ಙೆ ಜಾರಿಯಲ್ಲಿರುವಾಗಲೇ ಕಲ್ಲಡ್ಕದಲ್ಲಿ ಮತೊಂದು ಹಲ್ಲೆ ಪ್ರಕರಣ ನಡೆಯಿತು.ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಉರಿಯುವ ಬೆಂಕಿಗೆ ಒಂದಷ್ಟು ತುಪ್ಪ ಸುರಿಯಲ್ಪಟ್ಟು ಪರಿಸ್ಥಿತಿ ಬಿಗಡಾಯಿಸಲ್ಪಟ್ಟಿತು.ತಕ್ಷಣ ಪಕ್ಕದ ಬೆಳ್ತಂಗಡಿ,ಪುತ್ತೂರು,ಸುಳ್ಯ ತಾಲೂಕಿಗೂ ನಿಷೇದಾಜ್ಙೆ ವಿಸ್ತರಿಸಲ್ಷಟ್ಟಿತು.ಹಾಗೆಯೇ ಕಲ್ಲಡ್ಕದ ಎರಡನೇ ಘಟನೆಯಂದು ಮೆಲ್ಕಾರ್ ನಲ್ಲಿ ಚೂರಿ ಇರಿತ ,ತಂಬೆಯಲ್ಲಿ ಹಲ್ಲೆ ಪ್ರಕರಣ ದಾಖಲಾಯಿತು.

ಇದಾದ ಬೆನ್ನಿಗೆ ಜೂ.೨೧ ರಂದು ಬೆಂಜನಪದವಿನಲ್ಲಿ ರಿಕ್ಷಾ ಚಾಲಕ ಅಶ್ರಫ್ ಎಂಬವರ ಕೊಲೆ ನಡೆಯಿತು.ಇದರಿಂದ ತಾಲೂಕಿನಲ್ಲಿ ಪರಿಸ್ಥಿತಿ ಮತ್ತೆ ಹದಗೆಟ್ಟಿತು.ಆಗ ಜಾರಿಯಲ್ಲಿದ್ದ ನಿಷೇದಾಜ್ಙೆಯನ್ನು ೨೭ರ ವರೆಗೆ ವಿಸ್ತರಿಸಲಾಯಿತು.ಇದರ ಜೊತೆಯಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಯಿತು.ಸಾಲದೆಂಬಂತೆ ಹೊರಜಿಲ್ಲೆಯಿಂದಲೂ ಪೊಲೀಸ್ ಪೋಸ್೯ ತರಿಸಾಯಿತು.ಪೊಲೀಸ್ ಎಡಿಜಿಪಿಯಿಂದ ಹಿಡಿದು ಐಜಿಪಿ,ಎಸ್ಪಿ ಇಲ್ವೆ ಬೀಡು ಬಿಟ್ವಿದ್ದರು.ವಿವಿಧ ಠಾಣೆಯ ಇನ್ಸ್ ಪೆಕ್ಟರ್,ಎಸ್ಐಗಳನ್ನು ಕರೆಸಲಾಗಿತ್ತು.ಚಿಕ್ಕಮಗಳೂರು ಜಿಲ್ಲೆಯ ಎಸ್ಪಿ ಅಣ್ಣಾಮಲೈ ಅವರೇ ಬಂಟ್ವಾಳದಲ್ಲಿ ಸುತ್ತಾಡಿದ್ದರು. ಇದೀಗ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ.ಆದರೆ ಮುಂಜಾಗ್ರತೆಗಾಗಿ ಜಿಲ್ಲಾಡಳಿತ ಜೂ.೩೦ ರತನಕ ನಿಷೇದಾಜ್ಙೆಯನ್ನು ಮುಂದುವರಿಸಿದೆ.ಜೊತೆಗೆ ಬೆಳ್ತಂಗಡಿ,ಪುತ್ತೂರು,ಸುಳ್ಯ ತಾಲೂಕಿನಲ್ಲೂ ನಿಷೇದಾಜ್ಙೆ ಮುಂದುವರಿಸಿದೆ.ಹಾಗೆಯೇ‌ ಪೊಲೀಸ್ ಇಲಾಖೆ ಮತ್ತೆ ಅತಂಕದ ವಾತಾವರಣ ಮರುಕಳಿಸದಂತೆ ಮನ್ನಚ್ಚರಿಕೆ ವಹಿಸಿದೆ.

By Suddi9

Leave a Reply

Your email address will not be published. Required fields are marked *