ಮೇಳೈಸಿದ ಕೃಷಿಗೀತೆ, ಪಾಡ್ದನಗಳ ಇಂಪು
ಸುದ್ದಿ9 ಕೈಕಂಬ: ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ಪೊಳಲಿ ರಾಜರಾಜೇಶ್ವರಿ ದೇವಳದ ವಿಶ್ವಪ್ರಸಿದ್ಧ ಚೆಂಡಿನಾಟದ ಗದ್ದೆಯಲ್ಲಿ(ಪುರಲ್ದ ಚೆಂಡ್) ಶುಕ್ರವಾರ ಶುಭದಿನಂದು ಊರ ಮಹಿಳೆಯರು ಸೇರಿ, ಸಾಂಪ್ರದಾಯಿಕವಾಇ ನಾಟಿ ಮಾಡುವ ಮೂಲಕ ಗಮನಸೆಳೆದರು
ವರ್ಷಂಪ್ರತಿ ಪೊಳಲಿ ದೇವಳದ ಸುದೀರ್ಘ ಒಂದು ತಿಂಗಳ ಜಾತ್ರೆಯ ಪ್ರಯುಕ್ತ ಇದೇ ಗದ್ದೆಯಲ್ಲಿ ಐದು ದಿನಗಳ ಚೆಂಡು(ಅಮ್ಮುಂಜೆ, ಮಣೇಲ್-ಮಲ್ಲೂರು, ಬೊಳ್ಳೂರು) ಸೇವೆ ಜರುಗುವುದು ಜನಜನಿತ. ಈ ಗದ್ ದೆಯಲ್ಲಿ ಉಳುಮೆ, ನಾಟಿ ಮಾಡುವ ಕಾಯಕ ಪ್ರಾಪ್ತಿಗೆ ಊರವರು ಹೆಮ್ಮೆಯಿಂದ ಬೀಗುತ್ತಾರೆ.

26 vp polali nati karya 1

26 vp polali nati karya
ಈ ಮಧ್ಯೆ ಕೆಲವೊಂದು ಕಾರಣಗಳಿಂದ ಈ ಗದ್ದೆಯಲ್ಲಿ ಕೃಷಿ ಕಾರ್ಯಗಳು ಸ್ಥಗಿತಗೊಂಡಿರುವ ಉದಾಹರಣೆಗಳಿವೆ. ಆದರೆ ಕಳೆದ ವರ್ಷದಿಂದೀಚೆಗೆ ಊರ ಕೆಲ ಪ್ರಮುಖರು ಒಂದಾಗಿ ಕೃಷಿ ಕರ್ಯ ನಡೆಸುವ ಬಗ್ಗೆ ತೀಮರ್ಾನಿಸಿ ಊರವರನ್ನೆಲ್ಲಾ ಒಟ್ಟು ಸೇರಿಸಿ ಕೃಷಿ ಸೇವೆಗೆ ಮುಂದಾಗಿರುವುದು ಶ್ಲಾಘನೀಯ. ಅದೆಷ್ಟೋ ಕಡೆಗಳಲ್ಲಿ ಇಂಥ ಪ್ರಯುಕ್ತ ಗದ್ದೆಗಳೂ ಕೂಡ `ಪಡೀಲ್’ ಬಿದ್ದಿರುವುದು ಎನಿಸುತ್ತದೆ. ಆದರೆ ಇಲ್ಲಿನ ಜನರ ಉತ್ಸಾಹ ಕೃಷಿಪ್ರಿಯರ ಮನತಣಿಸುತ್ತದೆ.
ಈ ಗದ್ದೆಯಲ್ಲಿ ಕೃಷಿಕಾರ್ಯದಲ್ಲಿ ಪಾಲ್ಗೊಳ್ಳುವ ಪುರುಷ ಅಥವಾ ಮಹಿಳೆಯರು ಸಾಂಪ್ರದಾಯಿಕ ನಿಯಮಗಳಿಗುಣವಾಘಿ ಬದ್ಧವಾಗಿರುವುದು ಕಡ್ಡಾಯವಾಗಿರುವುದು. ಯಾವುದೇ ಸೂತಕ ಇರುವವರು ಈ ಗದ್ದೆಯ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಈ ಗದ್ದೆಯ ಕೆಲಸ ಕಾರ್ಯಗಳ ವೇಳೆ ಶುಚಿತ್ವ, ಮಡಿವಂತಿಕೆ, ಕಾಪಾಡುವುದು ಪ್ರಮುಖ ಅಂಶವಾಗಿರುತ್ತದೆ.
————————–
ಮೇಳೈಸಿದ ಕೃಷಿ ಸಂಗೀತ, ಪಾಡ್ದನ
ಈ ಬಾರಿಯ ವಿಶೇಷವೇನೆಂದರೆ ನಾಟಿ ಮಹಿಳೆಯರಿಗೆ ಉತ್ಸಾಹ ತುಮಬುವ ಸಲುವಾಗಿ ಪ್ರಸಿದ್ಧ ಕೃಷಿಗೀತೆ ಹಾಗೂ ಪಾಡ್ದನ ಗಾಯಕಿ ಕುಪ್ಪೆಪದವು ಲೀಲಾ ಅವರನ್ನು ಕರೆಯಿಸಲಾಗಿತ್ತು. ಅವರು ಎಲ್ಲರೊಳಗೊಂದಾಗಿಕೃಷಿ ಗೀತೆ, ಪಾಡ್ದನಗಳನ್ನು ಹಾಡಿದರು. ಪೊಳಲಿ ಸೀಮೆಯ 29 ಮಂದಿ ಮಹಿಳೆಯರು ಲೀಲಾಅವರಿಗೆ ಸಂಗಡಿಗರಾಗಿ ಸಾಥ್ ನೀಡಿದರು. ಅವರ ಸ್ವರಗಳಲ್ಲಿ ಓಬೇಲೆಯಿಂದ ಆರಂಭವಾಗಿ ಕೃಷಿ ಸಂಸ್ಕೃತಿಯನ್ನು ಸಾರುವ ವೈವಿಧ್ಯಮಯ ಹಾಡುಗಳು ಹಾಗೂ ಅಂತಿಮವಾಗಿ ಮಂಜೊಟ್ಟಿಗೋಣ ಪಾಡ್ದನ ಗಾಯನದೊಂದಿಗೆ ದೇವರ ಚೆಂಡಿನಾಟದ ಕಾರ್ಯವನ್ನು ಮುಗಿಸುತ್ತಾ ದೇವರ ಸ್ಥ್ಥುತಿಯಲ್ಲಿ ಎಲ್ಲರ ಸ್ವರ ಒಂದಾಗಿ ಕೇಳಿಸುತ್ತವೆ. ಎಲ್ಲರೂ ಸೇರಿ ಗೋವಂದಾಣಿ ಗೋವಿಂದ ಹೇಳಿ ಹಿಂತಿರುಗುವ ವೇಳೆ ಜೋರಾಗಿ ಕೂ…. ಎಂದು ಸ್ವರಾಲಯಗಳನ್ನು ಎಬ್ಬಿಸುತ್ತಾರೆ.
ಆರಂಭದಲ್ಲಿ ಎಲ್ಲರೂ ಒಂದಾಗಿ ಪ್ರಾರ್ಥನೆ ಸಲ್ಲಿಸಿದ ಗದ್ದೆಯ ಕೃಷಿಕಾರ್ಯ ನಡೆಸುವ ಜವಾಬ್ದಾರಿ ವಹಿಸಿರುವು ಊರ ಪ್ರಮುಖರು ನೇಜಿ ನೆಡುವ ಮೂಲಕ ಮಹೂರ್ತ ನಡೆಸುತ್ತಾರೆ. ಈ ಗದ್ದೆಯಲ್ಲಿ ನಾಟಿಯನ್ನು ಮಾಡುವ ಮೂಡಣ ದಿಕ್ಕಿನಲ್ಲಿ ಆರಂಭಿಸಿ ಪಡುವಣ ದಿಕ್ಕಿನಲ್ಲಿ ಮುಕ್ತಾಯಗೊಳಿಸುವುದು ಸಾಂಪ್ರದಾಯ. ಕೃಷಿ ಸಂಸ್ಕೃತಿಯನ್ನು ಕಾಪಾಡುವಲ್ಲಿ ಇದೊಂದು ಉತ್ತಮ ಬೆಳವಣಿಗೆ ಎನ್ನಬಹುದು. ಇದು ಪೊಳಲಿ ಕ್ಷೇತ್ರದ ದೇವರ ಗದ್ದೆಯಾಗಿದ್ದು ಎರಡೂವರೆ ಮುಡಿ ಬಿತ್ತನೆ ಬೀಜ(ಭತ್ತ)ವನ್ನು ಉಪಯೋಗಿಸುತ್ತಾರೆ.

>> ಸಂಪಾದಕ

By suddi9

Leave a Reply

Your email address will not be published. Required fields are marked *