ಬಂಟ್ವಾಳ : ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಮೊಟ್ಟೆ ವಿತರಿಸುವ ರಾಜ್ಯ ಸರಕಾರದ ಕಾರ್ಯಕ್ರಮದಂತೆ ನೇರಳಕಟ್ಟೆ ಶಾಲಾ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣಾ ಕಾರ್ಯಕ್ರಮಕ್ಕೆ ನೆಟ್ಲಮುಡ್ನೂರು ಗ್ರಾ.ಪಂ. ಉಪಾಧ್ಯಕ್ಷೆ ರೇವತಿ ಚಾಲನೆ ನೀಡಿದರು.

ಈ ಸಂದರ್ಭ ನೆಟ್ಲಮುಡ್ನೂರು ಗ್ರಾ.ಪಂ. ಸದಸ್ಯೆ ಪ್ರೇಮಾ, ನೇರಳಕಟ್ಟೆ ಹಿರಿಯ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರೋಹಿತಾಶ್ವ, ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಐ., ನೇರಳಕಟ್ಟೆ ಬಾಲವಿಕಾಸ ಸಮಿತಿ ಸದಸ್ಯರುಗಳಾದ ಸುಧಾ ಟಿ. ನಾಯಕ್, ವಿಮಲ, ಸುಗಂಧಿ, ಗೀತಾ, ಜಮೀಳಾ, ಸಕೀನಾ, ದೇಜಮ್ಮ, ಸರೋಜಿನಿ, ಶಹನಾಝ್, ಖೈರು, ಸುಧಾ, ಅಂಗನವಾಡಿ ಶಿಕ್ಷಕಿ ವಸಂತಿ, ಸಹಾಯಕಿ ಪುಷ್ಪಾ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *