ಕೈಕಂಬ: ಹತ್ತು ಹಲವು ದನಗಳ್ಳತನ ಪ್ರಕರಣದಲ್ಲಿ ಪೋಲಿಸರಿಗೆ ಬೇಕಾಗಿದ್ದ ತೋಡಾರಿನ ರೆಹಮ್ಮತ್ ಅಪಾರ್ಟಮೆಂಟ್ ನಿವಾಸಿ ಮಹಮ್ಮದ್ ಆರೀಫ್ (24) ಅಲಿಯಾಸ್ ಆರೀಫ್ ಪುಚ್ಚೇರಿ ಎಂಬ ಕುಖ್ಯಾತ ದನಗಳ್ಳನನ್ನು ಬಜ್ಪೆ ಠಾಣಾ ಪೋಲಿಸರು ಗುರುವಾರ ಬಂಧಿಸಿದ್ದಾರೆ.
ಈವರೆಗೆ ಸಿಕ್ಕ ಮಾಹಿತಿ ಪ್ರಕಾರ ಈತನ ಮೇಲೆ ಸುಮಾರು 16 ಪ್ರಕರಣ ದಾಖಲಾಗಿದ್ದು ಈ ಪೈಕಿ ಬಜ್ಪೆ ಠಾಣೆಯಲ್ಲಿ.5 ಸುರತ್ಕಲ್ ಠಾಣೆಯಲ್ಲಿ.1 ಕಾವೂರು ಠಾಣೆಯಲ್ಲಿ.1 ಪುತ್ತುರು ಗ್ರಾಮಾಂತರ ಠಾಣೆಯಲ್ಲಿ .1 ಮಡಿಕೇರಿಯ ಶನಿವಾರಸಂತೆ ಠಾಣೆಯಲ್ಲಿ.4 ಕುಶಾಲನಗರ ಠಾಣೆಯಲ್ಲಿ.3 ಸೋಮವಾರಪೇಟೆಯಲ್ಲಿ .1 ಪ್ರಕರಣ ದಾಖಲಾಗಿದ್ದು ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ತಿರುಗಾಡುತಿದ್ದ.ಇಂದು ಎಡಪದವು ಸಮೀಪದ ತೋಡಾರಿನಲ್ಲಿ ಆತನನ್ನು ಬಜ್ಪೆ ಠಾಣಾ ಇನ್ಸ್ಪೆಕ್ಟರ್ ಟಿಡಿ ನಾಗರಾಜ್ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
