ಬಿಸಿರೋಡ್: ಕಲ್ಲಡ್ಕದಲ್ಲಿ ನಡೆದ ಗಲಭೆಯ ನೆನಪು ಜನರ ಮನಸ್ಸಿನಂದ ಮಾಸುವ ಮುನ್ನವೆ ಬೆಂಜನಪದವಿನಲ್ಲಿ ನಡೆದ ಕೊಲೆ ಪ್ರಕರಣ ಜನರ ನಿದ್ದೆ ಕೆಡಿಸುವಂತೆ ಮಾಡಿದೆ. ಬಿ.ಸಿ ರೋಡು,ಬಂಟ್ವಾಳ, ಅಮ್ಮುಂಜೆ,ಕಲ್ಲಡ್ಕ,ಸುತ್ತಮುತ್ತಲಿನ ಪ್ರದೇಶಗಳು ಬೂದಿ ಮುಚ್ಚಿದ ಕೆಂಡದಂತಿದ್ದು ಭೀತಿಯಿಂದ ಸಮಯ ಕಳೆಯುವಂತಾಗಿದೆ.
ಜೊತೆಯಲ್ಲಿ ಬೆಂಜನಪದವು, ಶಿವಾಜಿನಗರ ,ಕೆ.ಸಿ ರೋಡು ಹಾಗೂಕೆಲವೆಡೆ ಕಲ್ಲು ತೂರಾಟವಾಗಿದೆ ಎಂಬ ವದಂತಿಗಳು ಹರಿದಾಡುತಿದ್ದು ಜನರ ನಿದ್ದೆಗೆಡುವಂತೆ ಮಾಡಿದೆ. ಬಿ.ಸಿ ರೋಡು ಪರಿಸರದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿವೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಬಿ.ಸಿ ರೋಡ್‍ನಿಂದ ಪುಂಚಮೆವರೆಗಿನ ಅಂಗಡಿಗಳನ್ನು ಪೋಲಿಸರೇ ಮುಚ್ಚಿಸುತಿದ್ದದ್ದು ಕಂಡುಬಂತು ಜೊತೆಗೆ ಕೋಮುಸೂಕ್ಷ್ಮ ಪ್ರದೇಶದಲ್ಲಿ ಬಿಗು ಬಂದೋಬಸ್ತ್ ಮಾಡಲಾಗಿದೆ.
ಬಿ.ಸಿ ರೋಡುನಲ್ಲಂತೂ ವಾಹನ ಸಂಚಾರ ವಿರಳವಾಗಿದೆ. ಶಾಲಾ ಕಾಲೇಜುಗಳು ಅರ್ಧ ದಿನ ರಜೆ ನೀಡಿ ಸುರಕ್ಷತೆಯತ್ತ ಗಮನ ಹರಿಸಿದವು. ಸಾರ್ವಜನಿಕರು ವದಂತಿಗಳಿಗೆ ಕಿವಿ ಕೊಡದಂತೆ ಪೋಲಿಸ್ ಇಲಾಖೆ ಮನವಿ ಮಾಡಿದೆ.
