ಭಾರತೀಯ ಜನತಾಪಾರ್ಟಿ ತೆಂಕಬೆಳ್ಳೂರು, ಸ್ಠಾನೀಯ ಸಮಿತಿಯ ಮಾಜಿ ಕಾರ್ಯದರ್ಶಿಯಾಗಿದ್ದ ದಿ. ಪುರುಶೋತ್ತಮ ಆಚಾರ್ಯ ಇವರ ಮನೆಗೆ ಬಡಗಬೆಳ್ಳೂರು ಬಿಜೆಪಿ ಪಂಚಾಯತ್ ಸಮಿತಿ ಮತ್ತು ಕರಿಯಂಗಳ ಬಿಜೆಪಿ ಪಂಚಾಯತ್ ಸಮಿತಿ ವತಿಯಿಂದ ಸಹಾಯ ಧನವನ್ನು ಬಂಟ್ವಾಳ ತಾಲೂಕು ಬಿಜೆಪಿ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ವೆಂಕಟೇಶ್ ನಾವುಡ ಪೂಳಲಿ ಇವರು ದಿ. ಪುರುಶೋತ್ತಮ ಆಚಾರ್ಯ ಇವರ ಪತ್ನಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಬಿಜೆಪಿ ಯುವ ಮೋರ್ಚ ಸದಸ್ಯರಾದ ಶ್ರೀ ತಿರುಲೇಶ್ ಬೆಳ್ಳೂರು, ಬಡಗಬೆಳ್ಳೂರು ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷರಾದ ಶ್ರೀ ಪ್ರಕಾಶ್ ಬಡಗಬೆಳ್ಳೂರು, ಬಡಗಬೆಳ್ಳೂರು ಬಿಜೆಪಿ ಪಂಚಾಯತ್ ಸಮಿತಿ ಉಪಾಧ್ಯಕ್ಷರಾದ ಉಸ್ಮಾನ್ ಡಿ. ಮತ್ತು ತೆಂಕಬೆಳ್ಳೂರು ಬಿಜೆಪಿ ಸ್ಥಾನಿಯ ಸಮಿತಿ ಅಧ್ಷಕ್ಷರಾದ ಲೋಕನಾಥ ಪೂಜಾರಿ ಕಮ್ಮಾಜೆ ಉಪಸ್ಥಿತರಿದ್ದರು.


