-ಬಲಿ ಉತ್ಸವ
ಬಂಟ್ವಾಳ ತಾಲೂಕಿನಲ್ಲಿ ಸುಮಾರು 800 ವರ್ಷಗಳ ಹಿನ್ನೆಲೆ ಹೊಂದಿರುವ ಪುರಾಣ ಪ್ರಸಿದ್ಧ ಅರಳ-ಕೊಯಿಲ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಸೋಮವಾರ ಬೆಳಿಗ್ಗೆ ನಡೆದ ದೇವರ ಬಲಿ ಉತ್ಸವ ಆಕರ್ಷಕವಾಗಿತ್ತು
ದೇವಳದ ಆಡಳಿತ ಮೊಕ್ತೇಸರ ಎ.ರಾಜೇಂದ್ರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎನ್.ಎಂ.ಅಡ್ಯಂತಾಯ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ ಆಳ್ವ ಅಗ್ಗೊಂಡೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್. ಮುರಳೀಧರ ಶೆಟ್ಟಿ ಸಂಗಬೆಟ್ಟು, ಕೋಶಾಧಿಕಾರಿ ರಂಜನ್ ಕುಮಾರ್ ಶೆಟ್ಟಿ, ಮಂಜಯ ಶೆಟ್ಟಿ ಹೊಸಬೆಟ್ಟುಗುತ್ತು, ಪ್ರಧಾನ ಅರ್ಚಕ ರಾಜ ಭಟ್ ಹುಣ್ಸೆಯಡಿ, ಹರೀಶ ಭಟ್, ದಿನೇಶ ಭಟ್ ಮತ್ತಿತರರು ಇದ್ದರು.
ಮುಹೂರ್ತ
ಬಂಟ್ವಾಳ ತಾಲೂಕಿನ ಪುರಾಣ ಪ್ರಸಿದ್ಧ ಅರಳ-ಕೊಯಿಲ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಅಮ್ಟಾಡಿ ಕ್ಷೇತ್ರದ ಆಡಳಿತ ಮೊಕ್ತೇಸರ ರವಿಶಂಕರ ಶೆಟ್ಟಿ ಮಾವಂತೂರು ಅಜ್ಜಿಬೆಟ್ಟುಗುತ್ತು ಮತ್ತು ಕುಟುಂಬಿಕರ ವತಿಯಿಂದ ನಿರ್ಮಾಣಗೊಳ್ಳಲಿರುವ ಬ್ರಹ್ಮರಥಕ್ಕೆ ಸೋಮವಾರ ಬ್ರಹ್ಮಶ್ರೀ ಉದಯ ಪಾಂಗಣ್ಣಾಯ ಮಾರ್ಗದರ್ಶನದಲ್ಲಿ ಮುಹೂರ್ತ ನೆವೇರಿಸಲಾಯಿತು. ದೇವಳದ ಆಡಳಿತ ಮೊಕ್ತೇಸರ ಎ.ರಾಜೇಂದ್ರ ಶೆಟ್ಟಿ, ಪ್ರಮುಖರಾದ ವಜ್ರನಾಭ ಶೆಟ್ಟಿ ಅಗ್ಗೊಂಡೆಗುತ್ತು, ಮಂಜುನಾಥ ಭಂಡಾರಿ ಶೆಡ್ಡೆ, ಹರಿರಾಜ್ ಶೆಟ್ಟಿ ಬಾರ್ಲಗುತ್ತು, ಹರಿಶ್ಚಂದ್ರ ಪಕ್ಕಳ, ಎಂ.ದೇವಪ್ಪ ಶೆಟ್ಟಿ ಮಾವಂತೂರು, ಶಶಿಧರ ರೈ, ಸುದರ್ಶನ ಜೈನ್, ಅಗ್ಗೊಂಡೆ ಜಗದೀಶ ಆಳ್ವ, ಎಸ್.ಮುರಳೀಧರ ಶೆಟ್ಟಿ, ಪ್ರಧಾನ ಅರ್ಚಕ ರಾಜ ಭಟ್ ಹುಣ್ಸೆಯಡಿ, ಹರೀಶ ಭಟ್, ಶಿಲ್ಪಿ ದಿನೇಶ ಆಚಾರ್ಯ ಮತ್ತಿತರರು ಇದ್ದರು.