ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪೊಳಲಿಯ ರಾಮಕೃಷ್ಣ ತಪೋವನದಲ್ಲಿಯೂ, ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ ಕರ್ನಾಟಕ ಇದರ ವತಿಯಿಂದ ಯೋಗ ದಿನವನ್ನು ಆಚರಿಸಲಾಯ್ತು. ರಾಮಕೃಷ್ಣ ತಪೊವನದ ಸ್ವಾಮಿ ಪದ್ಮಪಾದಾನಂದ ಆಶೀರ್ವಚನ ನೀಡುತ್ತಾ “ಆರೋಗ್ಯಯುಕ್ತ ಜೇವನಕ್ಕೆ ಯೋಗ ಸಹಕಾರಿಯಾಗಿದ್ದು ಪ್ರತಿನಿತ್ಯ ಯೋಗ ಮಾಡುವುದರಿಂದ ಆಯಸ್ಸು ವೃದ್ಧಿಯಾಗಿ ಶಾಂತಿಯುತ ಮನಸ್ಸು ಇರುವುದೆಂದು ತಿಳಿಸಿದರು”. ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ ಇದರ ಶಿವಾನಂದ ಅಣ್ಣ ಇವರು ಯೋಗದ ಮಹತ್ವದ ಕುರಿತು ಬೌದ್ಧಿಕ್ ನೀಡಿದರು. ಭುಜಂಗ ಅಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಶಿಬಿರದಲ್ಲಿ ಸುಮಾರು 100 ಮಂದಿ ಯೋಗ ಅಭ್ಯಾಸದಲ್ಲಿ ಪಾಲ್ಗೊಂಡದ್ದರು.





