ಬಂಟ್ವಾಳ: ಮಾಣಿ ಕುಲಾಲ ಸಂಘ (ರಿ). ಇದರ ಅಧೀನದಲ್ಲಿ ರಚನೆಯಾದ ಪೆರಾಜೆ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಉತ್ಸಾಹಿ ಯುವ ಸಂಘಟಕ ಸಿವಿಲ್ ಇಂಜಿನಿಯರ್ ಬಾಲಕೃಷ್ಣ ಮಿತ್ತಪೆರಾಜೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಯತಿರಾಜ್ ಮಾಸ್ಟರ್ ಮಿತ್ತಪೆರಾಜೆ, ಗೌರವಾಧ್ಯಕ್ಷರಾಗಿ ಕಿಶೋರ್ ಪೆರಾಜೆ, ಉಪಾಧ್ಯಕ್ಷರಾಗಿ ಪುರುಷೋತ್ತಮ ಸಾದಿಕುಕ್ಕು, ಜತೆ ಕಾರ್ಯದರ್ಶಿಗಳಾಗಿ ದಿನೇಶ್ ಬಡೆಕೋಡಿ, ಮೋಹನ್ ಸಾದಿಕುಕ್ಕು, ಕೋಶಾಧಿಕಾರಿಯಾಗಿ ಪದ್ಮನಾಭ ಕೊಮ್ಮಕೋಡಿ, ಜತೆ ಕೋಶಾಧಿಕಾರಿಗಳಾಗಿ ಸಂದೀಪ್ ಕೊಮ್ಮಕೋಡಿ, ಸಂದೀಪ್ ಮೈಂದಗುರಿ, ಸಂಘಟನಾ ಕಾರ್ಯದರ್ಶಿ ಲಿಂಗಪ್ಪ ಮೈಂದಗುರಿ, ಜತೆ ಸಂಘಟನಾ ಕಾರ್ಯದರ್ಶಿಗಳಾಗಿ ಜನಾರ್ಧನ ಮಿತ್ತಕೋಡಿ, ಜನಾರ್ಧನ ಏಣಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ಪುರುಷೋತ್ತಮ ಸಾಗು, ಜತೆ ಕ್ರೀಡಾ ಕಾರ್ಯದರ್ಶಿಗಳಾಗಿ ಸಂದೀಪ್ ಮಿತ್ತಪೆರಾಜೆ, ದೀಪಕ್ ಕೊಮ್ಮಕೋಡಿ, ಪ್ರಚಾರ ಸಮಿತಿಯ ಪ್ರಮುಖರಾಗಿ ಮನೋಜ್ ಮಿತ್ತ ಪೆರಾಜೆ, ತುಕರಾಂ ಕೊಮ್ಮಕೋಡಿ, ಶಿವಪ್ರಸಾದ ಮಿತ್ತಪೆರಾಜೆ, ಸಂದೇಶ್ ಮಿತ್ತಪೆರಾಜೆ, ಚಂದ್ರಹಾಸ ಸಾದಿಕುಕ್ಕು ಮತ್ತು ಸಲಹಾ ಸಮಿತಿಯ ಪ್ರಮುಖರಾಗಿ ಉಮೇಶ್ ಸಾದಿಕುಕ್ಕು, ವಾಮನ ಕುಲಾಲ್ ಚಂದ್ರಶೇಖರ ಸಾದಿಕುಕ್ಕು ಆಯ್ಕೆಯಾಗಿದ್ದಾರೆ .
