ಉಡುಪಿ: ಮೊಗವೀರ ಯುವ ಜನ ಸಂಘಟನಾ ಡಾ|| ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಸಂದರ್ಭದಲ್ಲಿ ಜೂನ್14 ಬುಧವಾರ ಮಣಿಪಾಲ ಕೆ.ಎಂ.ಸಿ ಯ ರಕ್ತನಿಧಿ ಕೇಂದ್ರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ನಾಡೋಜ ಜಿ.ಶಂಕರ್ ಉದ್ಘಾಟಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ|| ಶಮ್ಮಿ ಶಾಸ್ರೀ,ಸತೀಶ್ ಸಾಲ್ಯಾನ್,ಜಯ ಸಿ ಕೋಟ್ಯಾನ್,ಸಿಬ್ಬಂದಿಗಳು ಮತ್ತು ಯುವ ಸಂಘಟನೆಯ ಪಧಾಧಿಕಾರಿಗಳು ಉಪಸ್ಥಿತರಿದ್ದರು.
