ವಿಟ್ಲ ಜೂನ್ 13: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಹಾಗೂ ಸರಕಾರಿ ಆರೋಗ್ಯ ಇಲಾಖೆಯ ಜಂಟಿ ಆಶ್ರಯದಲ್ಲಿ ಸ್ಕೂಲ್ ಚಿಲ್ಡ್ರನ್ ವಿಶನ್ ಸ್ಕ್ರೀನಿಂಗ್ ಕಾರ್ಯಕ್ರಮವು ನಡೆಯಿತು.ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಶಾಲಾ ಆಡಳಿತಾಧಿಕಾರಿ ಸಿ. ಶ್ರೀಧರ್, ಮಾತನಾಡುತ್ತಾ “ ಪಂಚೇಂದ್ರಿಯಗಳಲ್ಲಿ ಅತೀ ಮುಖ್ಯವಾದ ಕಣ್ಣನ್ನು ಉಳಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು”.IMG_1585

IMG_1598 (1) IMG_1582ರೋಟರಿ ಕ್ಲಬ್‍ನ ಅಧ್ಯಕ್ಷರಾದ ರೋ|| ಚಂದ್ರಹಾಸ ಶೆಟ್ಟಿಯವರು ಮಾತನಾಡಿ ‘ ಇಂದಿನ ದಿನಗಳಲ್ಲಿ ದೃಷ್ಟಿದೋಷದ ಸಮಸ್ಯೆ ಸಾಮಾನ್ಯವಾಗಿದೆ. ಆದ್ದರಿಂದ ಈ ಶಿಬಿರದಲ್ಲಿ ಎಲ್ಲರೂ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಡಾ|| ಶಾಂತರಾಜ್, ನೇತ್ರಾಧಿಕಾರಿ ಬಂಟ್ವಾಳ ಇವರು ಮಾತನಾಡುತ್ತಾ “ ಪ್ರಾಥಮಿಕ ಹಂತದಿಂದಲೇ ದೃಷ್ಟಿದೋಷ ನಿವಾರಿಸುವ ಪ್ರಯುಕ್ತ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‍ನ ಕಾರ್ಯದರ್ಶಿ ರೋ|| ಉಮೇಶ್ ನಿರ್ಮಲ್, ಆ್ಯನ್ಸ್ ಕ್ಲಬ್‍ನ ಅಧ್ಯಕ್ಷೆ ರೋ|| ಪಲ್ಲವಿ ಕಾರಂತ್, ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿಯ ವೈದ್ಯಾಧಿಕಾರಿ ಡಾ|| ಶಶಿಕಲಾ, ಹಿರಿಯ ಆರೋಗ್ಯ ಸಹಾಯಕಿ ಕಸ್ತೂರಿ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ|| ಬಿ.ಎಸ್.ನಾೈಕ್ ಮೂಖ್ಯೋಪಾಧ್ಯಾಯಿನಿಯರಾದ ವಿಜಯಲಕ್ಷ್ಮೀ .ವಿ . ಶೆಟ್ಟಿ, ಗ್ರೇಸ್ ಪಿ. ಸಲ್ಡಾನ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಲೀಲಾರವರು ಸ್ವಾಗತಿಸಿದರು , ಸುಧಾ .ಎನ್. ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

By Suddi9

Leave a Reply

Your email address will not be published. Required fields are marked *