“ಲೆಟ್ಸ್ ಗೋ ಗ್ರೀನ್” ವಿವಿಧ ಸರಕಾರಿ ಶಾಲೆಗಳಲ್ಲಿ ವಿಶ್ವ ಪರಿಸರ ದಿನಾಚರಣೆ
ಬಂಟ್ವಾಳ: “ಲೆಟ್ಸ್ ಗೋ ಗ್ರೀನ್” ಎಂಬ ಧ್ಯೇಯವಾಕ್ಯದಡಿಯಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ ಐ ಓ) ಪಾಣೆಮಂಗಳೂರು ಶಾಖೆಯ ವತಿಯಿಂದ ಬಂಟ್ವಾಳ ತಾಲೂಕಿನ ವಿವಿಧ ಸರಕಾರಿ ಶಾಲೆಗಳಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ಸುರಿಬೈಲುವಿನ ಸರಕಾರಿ ಪ್ರೌಢಶಾಲೆ, ಕಾರಾಜೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಹಾಗೂ ಪಾಣೆಮಂಗಳೂರಿನ ಸರಕಾರಿ ಹಿರಿಯ ಪ್ರಾಥಮಿಕ ಸರಕಾರಿ ಶಾಲೆಯಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಎಸ್ ಐ ಓ ದ.ಕ. ಜಿಲ್ಲಾ ಕಾರ್ಯದರ್ಶಿ ಇರ್ಷಾದ್ ವೇಣೂರ್, ಪರಿಸರವು ಮಾನವನಿಗಾಗಿದೆ. ಪರಿಸರ ಇಲ್ಲದಿದ್ದಲ್ಲಿ ಮಾನವರ ಅಸ್ತಿತ್ವ ಅಸಾಧ್ಯ. ಪರಿಸರಕ್ಕೆ ಪೂರಕವಾಗಿ ಕೆಲಸ ಮಾಡಬೇಕಾಗಿದ್ದ ಮಾನವ ಇಂದು ತನ್ನ ಸ್ವಾರ್ಥ ಸಾಧನೆಗಾಗಿ ಹಾಳುಗೆಡವುತ್ತಿದ್ದಾನೆ. ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್ ನ ಮರುಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಪರಿಸರದ ರಕ್ಷಣೆಯ ಬಗ್ಗೆ ಪ್ರತಿಯೋರ್ವರಲ್ಲಿ ಅರಿವು ಮೂಡಿಸುವ ಕಾರ್ಯ ಪ್ರತಿಯೊಂದು ಮನೆಯಿಂದಲೇ ಆರಂಭವಾಗಬೇಕಾದ ಅಗತ್ಯತೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸುರಿಬೈಲ್ ಶಾಲೆಯ ಅಧ್ಯಕ್ಷ ಕೆ.ಎಂ. ಅಬೂಬಕ್ಕರ್, ಮುಖ್ಯ ಶಿಕ್ಷಕಿ ಶಾಂಭವಿ, ಶಿಕ್ಷಕ ಶಿವಪ್ರಸಾದ್, ಕಾರಾಜೆ ಶಾಲೆಯ ಅಧ್ಯಕ್ಷ ಸಾಹೆಬ್ ಕಾರಾಜೆ, ಸುಜಾತ ಟೀಚರ್, ಎಸ್ ಐ ಓ ಪಾಣೆಮಂಗಳೂರು ಶಾಖೆಯ ಕಾರ್ಯದರ್ಶಿ ಮುಬಾರಿಷ್ ಚೆಂಡಾಡಿ, ಮುತಹ್ಹರ್ ಬೋಳಂಗಡಿ, ರಿಝ್ವಾನ್ ಬೋಳಂಗಡಿ ಮತ್ತಿತರರು ಉಪಸ್ಥಿತರಿದ್ದರು.