ಬಂಟ್ವಾಳ: ಲಲಿತ್ ಎಂಬವರು ದಿನಾಂಕ: 13-12-2013ರಂದು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರ ಗಂಡ ಲಲಿತ್ ಎಂಬವರು ದಿನಾಂಕ: 11-12-2013 ರಂದು ಪಿರ್ಯಾದಿದಾರರ ತಾಯಿ ಮನೆಯಾದ ಸರಪಾಡಿ ಎಂಬಲ್ಲಿಂದ ಪಿರ್ಯಾದಿದಾರರ ತಾಯಿ ಜೊತೆ ಬಿಸಿರೋಡಿನಲ್ಲಿರುವ ಶೂ ಶಿಫ್ ಚಪ್ಪಲಿ ಅಂಗಡಿಗೆ ಕೆಲಸಕ್ಕೆ ಬಂದು ಚಪ್ಪಲಿ ಅಂಗಡಿಯಿಂದ ಜೆರಾಕ್ಷ್ ಮಾಡಿಸುವರೇ ಸಮಯ ಸುಮಾರು ಬೆಳಿಗ್ಗೆ 8-30 ಗಂಟೆಗೆ ಅಂಗಡಿಯಿಂದ ಹೊರಗೆ ಹೋದವರು ವಾಪಾಸು ಅಂಗಡಿಗೂ ಬಾರದೆ ಮನೆಗೂ ಬಾರದೆ ಕಾಣೆಯಾಗಿರುತ್ತಾರೆ. ಪಿರ್ಯಾದಿದಾರರಾದ ಯಶೋದ ಪ್ರಾಯ 23 ವರ್ಷ, ಗಂಡ: ಲಲಿತ್, ವಾಸ: ಬಚ್ಚಾರ್ ಮನೆ, ಸರಪಾಡಿ ಗ್ರಾಮ, ಬಂಟ್ವಾಳ ತಾಲೂಕು. ಎಂಬಿತ್ಯಾದಿ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ: 278/14 ಕಲಂ: ಮನುಷ್ಯಕಾಣೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಯಲ್ಲಿರುತ್ತದೆ.
ಕಾಣೆಯಾದ ಗಂಡಸಿನ ಚಹರೆ:
ಹೆಸರು: ಲಲಿತ್
ಪ್ರಾಯ : 35 ವರ್ಷ.
ಮೈಬಣ್ಣ: ಗೋದಿ ಮೈಬಣ್ಣ, ಸಾದಾರಣ ಶರೀರ
ಬಟ್ಟೆ: ನೀಲಿ ನೀಲಿ ಜೀನ್ಸ್ ಪ್ಯಾಂಟ್, ಬಿಳಿ ಶರ್ಟ್
ಬಾಷೆ: ಗುಜರಾತಿ, ಹಿಂದಿ
ಉದ್ಯೋಗ: ಮೆಕಾನಿಕ್
ಬಂಟ್ವಾಳ ನಗರ ಪೊಲೀಸ್ ಠಾಣೆ (ದೂರವಾಣಿ 08255-232111), ಪೊಲೀಸ್ ವೃತ್ತ ನಿರೀಕ್ಷಕರು ಬಂಟ್ವಾಳ ವೃತ್ತ (ದೂರವಾಣಿ 08255-235000) ಸಂಪರ್ಕಿಸುವರೇ ಕೋರಲಾಗಿದೆ.
ಸಹಿ/-
ಪೊಲೀಸ್ ಉಪ ನಿರೀಕ್ಷಕರು
ಬಂಟ್ವಾಳ ನಗರ ಪೊಲೀಸ್ ಠಾಣೆ

