ಬಂಟ್ವಾಳ: ಗಂಡನ ಮನೆಗೆ ಹೋಗಿ ಬರುವುದಾಗಿ ತಾಯಿ ಮನೆಯಿಂದ ಹೋದ ಗ್ರಹಿಣಿಯೋರ್ವಳು ನಾಪತ್ತೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.ಬರಿಮಾರು ಗ್ರಾಮದ ಬಲ್ಯ ನಿವಾಸಿ ಗ್ಯಾಬ್ರಿಯಲ್ ಎಂಬವರ ಪುತ್ರಿ ಪೌಲಿನ್ ಲಸ್ರಾದೋ(೨೮) ನಾಪತ್ತೆಯಾಗಿರುವ ಗ್ರಹಿಣಿ. ವರ್ಷದ ಹಿಂದೆ ರೋನಾಲ್ಡ್ ಡಿ ಸೋಜ ಎಂಬವರೊಂದಿಗೆ ವಿವಾಹವಾಗಿತ್ತು.
ಗಂಡ ಉದ್ಯೋಗ ನಿಮಿತ್ತ ವಿದೇಶದಲ್ಲಿರುವುದರಿಂದ ಪೌಲಿನ್ ತಾಯಿ ಮನೆಯಲ್ಲಿದ್ದಳು.ಮಂಗಳೂರಿನಲ್ಲಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಆಕೆ ಇತ್ತೀಚೆಗೆ ಕೆಲಸಕ್ಕೂ ಹೋಗದೆ ಮನೆಯಲ್ಲೆ ಇದ್ದಳೆಂದು ದೂರಿನಲ್ಲಿ ತಿಳಿಸಲಾಗಿದೆ.ಶುಕ್ರವಾರ ಬೆಳಿಗ್ಗೆ ಗಂಡನ ಮನೆಗೆ ಹೋಗಿ ಬರುವುದಾಗಿ ಮನೆಯಿಂದ ಹೋದಾಕೆ ವಾಪಾಸು ಬಂದಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.ಈಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.
