ವಿಟ್ಲ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ಇದರ ವಿಟ್ಲ ವಲಯದ ವಿಟ್ಲ ಎ ಒಕ್ಕೂಟದ ಚೈತನ್ಯ ಸ್ವ ಸಹಾಯ ತಂಡದ ಉಮೇಶ ಇವರ ನಿಧನದ ಪ್ರಯುಕ್ತ ಅವರ ಪ್ರಗತಿ ನಿಧಿ ಸಾಲಕ್ಕೆ ಹಾಗೂ ಅವರ ಪತ್ನಿ ಕಾವೇರಿ ಸ್ವ ಸಹಾಯ ತಂಡದ ಶ್ಯಾಮಲ ಇವರ ಪ್ರಗತಿ ನಿಧಿ ಸಾಲಕ್ಕೆ ಯೋಜನೆಯಿಂದ ಮಾಡಿದ ಪ್ರಗತಿ ನಿಧಿ ಭದ್ರತಾ ವಿಮಾ ಯೋಜನೆಯಲ್ಲಿ ಮಂಜೂರಾದ ರೂ 60,818 ಮೊತ್ತವನ್ನು ವಿಟ್ಲ ವಲಯ ಮೇಲ್ವಿಚಾರಕ ಜನಾರ್ಧನ ಶ್ಯಾಮಲ ರವರಿಗೆ ನೀಡಿದರು. ವಿಟ್ಲ ಎ ಒಕ್ಕೂಟದ ಸೇವಾ ಪ್ರತಿ ನಿಧಿ ಕೌಶಿತಾ ವಿಟ್ಲ ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
