ಬಂಟ್ವಾಳ: ಸುಮಾರು 5 ಲಕ್ಷ ಮೌಲ್ಯದ ಅಕ್ರಮ ಮರ ಸಾಗಾಟದ ಲಾರಿಯನ್ನು ವಶಕ್ಕೆ ಪಡೆದು ಮತ್ತು ಚಾಲಕನನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿಯವರ ತಂಡ ಬಂಧಿಸಿ ಪ್ರಕರಣ ದಾಖಲಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಉಪ್ಪಿನಂಗಡಿಯಿಂದ ಬಿಸಿರೋಡಿಗೆ ಮುಂಜಾನೆಯ ವೇಳೆ ಬರುತ್ತಿದ್ಸಾಗ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ವಲಯ ಅರಣ್ಯಾಧಿಕಾರಿಯವರು ಲಾರಿಯನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಅಕ್ರಮವಾಗಿ ಮರಸಾಗಾಟದ ಬಗ್ಗೆ ತಿಳಿದುಬಂದಿದೆ.

1 (1)ಲಾರಿ ಚಾಲಕ ಇಸ್ಮಾಯಿಲ್ ಬಂಧಿಸಿ ಮರದ ದಿಮ್ಮಿಗಳನ್ನು ಮತ್ತು ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಚರಣೆಯಲ್ಲಿ ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುರೇಶ್, ಉಪವಲಯಾರಣ್ಯಾಧಿಕಾರಿ ಪ್ರೀತಂ ಕುಮಾರ್ , ಅರಣ್ಯ ರಕ್ಷಕರುಗಳಾದ ಜಿತೇಶ್, ಚಿದಾನಂದ ಬಿ., ವಿನಯಕುಮಾರ್, ಶಿವಲಿಂಗ ಸ್ವಾಮಿ, ಹಾಗೂ ಜೀಪು ಚಾಲಕ ಜಯರಾಮ್ ಪಾಲ್ಗೊಂಡಿದ್ದು , ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ ಹನುಮಂತಪ್ಪ ಅವರ ಮಾರ್ಗದರ್ಶನದಲ್ಲಿ ಮುಂದಿನ ತನಿಖೆ ನಡೆಯುತ್ತಿದೆ.

By Suddi9

Leave a Reply

Your email address will not be published. Required fields are marked *