ಬಂಟ್ವಾಳ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್.ಐ.ಓ) ಪಾಣೆಮಂಗಳೂರು ಶಾಖೆಯ ವತಿಯಿಂದ ಎಸೆಸೆಲ್ಸಿಯಲ್ಲಿ ಬಂಟ್ವಾಳ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಮಂಚಿ ಕುಕ್ಕಾಜೆ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಶ್ರೇಯಾ ಹಾಗೂ ಬಂಟ್ವಾಳ ಎಸ್‍ವಿಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪಲ್ಲವಿ.ಡಿ.ಶೆಟ್ಟಿ (625 ರಲ್ಲಿ 622 ಅಂಕ) ಹಾಗೂ  ದ್ವಿತೀಯ ಸ್ಥಾನ ಗಳಿಸಿದ ಬಂಟ್ವಾಳ ಎಸ್‍ವಿಎಸ್ ಆಂಗ್ಲ ಮಾಧ್ಯಮ ಶಾಲೆಯ ಮೈನಾ ಅಂಜುಮ್ ಕೆ.ಕೆ. ಹಾಗೂ ಮಾಣಿ ಬಾಲವಿಕಾಸ ಶಾಲೆಯ ವಿದ್ಯಾರ್ಥಿನಿ ಶ್ರೀ ಲಕ್ಷ್ಮೀ ಕೆ.(625 ರಲ್ಲಿ 621) ಯವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.SIO4
SIO - 1 Shreya
SIO 2
SIO 5 Anjumಈ ಸಂದರ್ಭದಲ್ಲಿ ಎಸ್‍ಐಓ ಕರ್ನಾಟಕ ರಾಜ್ಯ ಕಾರ್ಯದರ್ಶಿ ದಾನಿಶ್ ಪಾಣೆಮಂಗಳೂರು, ಎಸ್‍ಐಓ ಪಾಣೆಮಂಗಳೂರು ಶಾಖೆಯ ಅಧ್ಯಕ್ಷ ತಮೀಝ್ ಅಲಿ ಕಾರಾಜೆ, ಎಸ್‍ಐಓ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಇರ್ಷಾದ್ ವೇಣೂರ್, ಯಾಸರ್ ಅಫ್ರೀನ್, ಮುಬಾರಿಶ್ ಚೆಂಡಾಡಿ ಮತ್ತಿತರರು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *