ಬಂಟ್ವಾಳ: ಕ್ರೀಡೆಯಿಂದ ಮನುಷ್ಯನ ಆರೋಗ್ಯದ ಜೊತೆ ಸಮಾಜದ ಆರೋಗ್ಯ ಕೂಡಾ ಉತ್ತಮವಾಗುತ್ತದೆ . ಕ್ರೀಡೆಯಲ್ಲಿ ಯಾವುದೇ ಜಾತಿ, ಧರ್ಮ, ಭಾಷೆ ಪ್ರಮುಖವಾಗುವುದಿಲ್ಲ, ಕೇವಲ ಕ್ರೀಡಾಪಟುವಿನ ಆಟಗಾರಿಕೆ ಮತ್ತು ವ್ಯಕ್ತಿತ್ವ ಹೆಚ್ಚುಗಾರಿಕೆಯಾಗುತ್ತದೆ ಎಂದು ಅರಣ್ಯ ಪರಿಸರ ಮತ್ತು ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು ಅವರು ಪುದು ವಲಯ ಯುವ ಕಾಂಗ್ರೆಸ್ ವತಿಯಿಂದ ಫರಂಗಿಪೇಟೆ ನೇತ್ರಾವತಿ ನದಿ ಕಿನಾರೆಯಲ್ಲಿ ಶನಿವಾರದಿಂದ 5 ದಿನಗಳ ಕಾಲ ನಡೆಯುವ ಎಪಿಎಲ್ ಲೀಗ್ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಯುವಕರ ಮಧ್ಯೆ ಸಾಮಾಜಿಕ ಸಾಮರಸ್ಯ. ಭಾವಕ್ಯತೆಯ ಭಾವನೆಯನ್ನು ಮೂಡಿಸಲು ಇಂತಹ ಕ್ರೀಡೆಗಳ ಮೂಲಕ ಅವಕಾಶ ಮಾಡಿಕೊಟ್ಟ ಪುದು ವಲಯ ಯುವ ಕಾಂಗ್ರೆಸ್‍ನ ಕಾರ್ಯ ಶಾಘ್ಲನೀಯವಾಗಿದೆ ಎಂದು ಅವರು ಹೇಳಿದರು. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಉಮರ್ ಫಾರೂಕ್, ಸಚಿವರ ಸಹಕಾರದೊಂದಿಗೆ ಇನ್ನಷ್ಟು ಇಂತಹ ಯುವ ಸಂಘಟನೆಯನ್ನು ಒಟ್ಟಾಗಿಸಿ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವ ಬಗ್ಗೆ ತಿಳಿಸಿದರು.
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಗೇರು ನಿಗಮದ ಅಧ್ಯಕ್ಷ ಬಿ.ಎಚ್ ಖಾದರ್, ಲುಕ್‍ಮಾನ್ ಕೈಕಂಬ , ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಎಂ.ಎ.ಗಪೂರ್ , ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ಉದ್ಯಮಿ ಕೆ.ಯಿ.ಎಲ್.ಇಸ್ಮಾಯಿಲ್, ತಾ.ಪಂ.ಸದಸ್ಯ ಸಮಾದ್ ಅಡ್ಯಾರ್, ತಾ.ಪಂ.ಮಾಜಿ ಸದಸ್ಯ ಆಶಿಫ್ ಇಕ್ಬಾಲ್, ಅಸೈನಾರ್ ಶಾಂತಿ ಅಂಗಡಿ, ರಫೀಕ್ ಪೆರಿಮಾರ್, ಹಕೀಂ ಮಾರಿಪಲ್ಲ, ರಫೀಕ್ ಪರಂಗಿಪೇಟೆ, ಅಶ್ವದ್ ಡೈಮಂಡ್, ಕಿಶೋರ್ ಸುಜೀರ್ , ಸಲಾಂ ಮಲ್ಲಿ, ಉಪಾಧ್ಯಕ್ಷ ಮುಹಮ್ಮದ್ ಹಾಶೀರ್, ಇಮ್ತಿಯಾಝ್ ಆಲ್ಫಾ, ಆಸಿಫ್ ಮೇಲ್ಮನೆ,,ಝಾಹಿರ್, ರಮ್ಲಾನ್, ಇಕ್ಬಾಲ್ ಸುಜೀರ್ , ಗ್ರಾಪಂ ಮಾಜಿ ಅಧ್ಯಕ್ಷ ಅಖ್ತರ್ ಹುಸೈನ್, ಸಲೀಂ ಪೆಲ್ಲಿ , ಮುಸ್ತಫಾ ಅಮೆಮಾರ್, ಅನ್ಸಾರ್ , ಇಮ್ರಾನ್ , ಮಜೀದ್ ಪೆರಿಮಾರ್ ಮೊದಲಾದವರು ಉಪಸ್ಥಿತರಿದ್ದರು.
