ಸುದ್ದಿ9 ಕೈಕಂಬ: ಧರ್ಮಸ್ಥಳದ ಉಜಿರೆಯ ಪಾಂಗಳ ನಿವಾಸಿ ಸೌಜನ್ಯಾ(17) ಕಾಮುಕರ ಅಟ್ಟಹಾಸಕ್ಕೆ ಬಲಿಯಾಗಿ 2 ವರ್ಷಗಳು ಸಂದಿವೆ. ಸಿಒಡಿ ತನಿಖೆಯಲ್ಲಿದ್ದ ಪ್ರಕರಣ ಹಲವಾರು ಸಂಘಟನೆಗಳು ಒತ್ತಡದಿಂದ ಈ ಪ್ರಕರಣ ಸಿಬಿಐಗೆ ಹಸ್ತಾಂತರಿಸಲ್ಪಟ್ಟಿದೆ.

soujanya
ಆದರೆ ತನಿಖೆ ನಿಧಾನಗತಿಯತ್ತ ಸಾಗುತ್ತಿದ್ದು, ಪ್ರಕರಣ ಏನಾಯ್ತೆಂದೇ ಇಂದಿಗೂ ಗೊತ್ತಾಗುತ್ತಿಲ್ಲ. ಆದರೆ ಧರ್ಮಸ್ಥಳದಲ್ಲಿ ಸೌಜನ್ಯಾ ಪರವಾಗಿ ಹೋರಾಡುತ್ತಿದ್ದ ಹಲವಾರು ಸಂಘಟನೆಗಳ ಮಧ್ಯೆ ಒಡಕು ಮೂಡಲಾರಂಭಿಸಿದೆ. ಒಟ್ಟಿನಲ್ಲಿ ರಾಜಕೀಯ ಹಿತಾಸಕ್ತಿಗೆ ಬಲಿಯಾಗುತ್ತಿರುವ ಸೌಜನ್ಯ ಪ್ರಕರಣ ಕೆಲವರಿಗೆ ತನ್ನ ವೈಯಕ್ತಿಕ ಬೇಳೆ ಬೇಯಿಸಲು ನೆರವಾಗುತ್ತಿದೆ. ಏನೇ ಇದ್ದರೂ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆಯ ಹಿಂದೆ ನಿಜವಾಗಿಯೂ ಯಾರಿದ್ದಾರೆ ಎಂಬ ಸತ್ಯ ಬಯಲಾಗಲಿ ಎಂಬುದು ನಮ್ಮ ಹಾರೈಕೆಯಾಗಲಿ.
-ಸಂ.

By suddi9

Leave a Reply

Your email address will not be published. Required fields are marked *