ಬಂಟ್ವಾಳ: ಕಳೆದ ಹಲವು ಸಮಯಗಳಿಂದ ಅಪಘಾತ ವಲಯವಾಗಿ ಗುರುತಿಸಿಕೊಂಡಿದ್ದ ಪುದು ಗ್ರಾಮದ ಹತ್ತನೇ ಮೈಲು ಪ್ರದೇಶಕ್ಕೆ ಟುಡೇ ಫೌಂಡೇಶನ್‍ನ ವತಿಯಿಂದ ಬ್ಯಾರಿಕೇಡ್‍ಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಫರಂಗಿಪೇಟೆ ಸಮೀಪದ ಹತ್ತನೆ ಮೈಲು ಪ್ರದೇಶದಲ್ಲಿ ಈ ಹಿಂದೆ ಹಲವಾರು ವಾಹನ ಅಪಘಾತಗಳು ನಡೆದಿದ್ದು ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಸ್ಥಳೀಯರ ಬೇಡಿಕೆಯಂತೆ ಟುಡೇ ಫೌಂಡೇಶನ್ ಫರಂಗಿಪೇಟೆ ವ್ಯಾಪ್ತಿಯ ವಿವಿಧೆಡೆ ಅಳವಡಿಸಲು ಹತ್ತು ಬ್ಯಾರಿಕೇಡ್‍ಗಳನ್ನು ಕೊಡುಗೆ ನೀಡಿದ್ದು ಮೊದಲ ಹಂತದಲ್ಲಿ ಹತ್ತನೇ ಮೈಲು ಬಳಿ ನಾಲ್ಕು ಬ್ಯಾರಿಕೇಡಗಳನ್ನು ಅಳವಡಿಸಲಾಯಿತು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕ ಉಮೇಶ್ ರಸ್ತೆ ಸುರಕ್ಷತೆಯ ಅಂಗವಾಗಿ ಬ್ಯಾರೀಕೇಡ್‍ಗಳನ್ನು ಉದ್ಘಾಟಿಸಿದರು. ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಸಂದರ್ಭ ಮಾತನಾಡಿ ಸ್ಥಳೀಯರ ಬೇಡಿಕೆಯಂತೆ ಈ ಬ್ಯಾರಿಕೇಡ್‍ಗಳನ್ನು ನೀಡಲಾಗಿದೆ. ಈ ಪ್ರದೇಶದಲ್ಲಿ ಹಲವು ಬಾರಿ ಅಪಘಾತಗಳು ನಡೆದು ಪ್ರಾಣ ಹಾನಿ ಸಂಭವಿಸಿದೆ. ಈ ನಿಟ್ಟಿನಲ್ಲಿ ಟುಡೇ ಫೌಂಡೇಶನ್ ವತಿಯಿಂದ ಬ್ಯಾರೀಕೇಡ್‍ಗಳನ್ನು ಕೊಡುಗೆಯಾಗಿ ನೀಡಲಾಗಿದೆ ಎಂದರು.
ಈ ಸಂದರ್ಭ ಪುದು ಗ್ರಾ.ಪಂ. ಅಧ್ಯಕ್ಷೆ ಆತೀಕಾ, ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಪಂಚಾಯಿತಿ ಸದಸ್ಯರಾದ ರಮ್ಲಾನ್ ಮಾರಿಪಳ್ಳ, ಇಕ್ಬಾಲ್ ಸುಜೀರ್, ಲತೀಫ್ ಕುಂಜತ್ಕಲ, ಇಸ್ಮಾಯಿಲ್, ಶರೀಫ್, ಸಲಾಂ ಮಲ್ಲಿ, ಮಜೀದ್ ಫರಂಗಿಪೇಟೆ, ಅಬೂಬಕ್ಕರ್ ಫರಂಗಿಪೇಟೆ, ನಿಸಾರ್, ಉಸ್ಮಾನ್ ಹಾಜರಿದ್ದರು.

