ಬಂಟ್ವಾಳ: ಆಥರ್ಿಕ ಸ್ವಾವಲಂಬನೆಯನ್ನು ಸಾಧಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ನಡೆಸಲು ಸಾಧ್ಯ ಎನ್ನುವುದನ್ನು ಸ್ತ್ರೀ ಶಕ್ತಿ ಸ್ವಸಹಾಯ ಗುಂಪಿನ ಮೂಲಕ ಮಹಿಳೆ ಸಾಧಿಸಿ ತೋರಿಸಿದ್ದಾಳೆ ಎಂದು ಜಿ.ಪಂ.ಸದಸ್ಯೆ ಮಮತಾಗಟ್ಟಿ ಹೇಳಿದರು.

1 (2)
ಅವರು ಮಂಗಳವಾರ ದ.ಕಿ.ಜಿಲ್ಲಾ ಪಂಚಾಯತ್ನ ಕೈಗಾರಿಕ ವಿಭಾಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸ್ತ್ರೀ ಶಕ್ತಿ ಗೊಂಚಲು ನರಿಕೊಂಬು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಉದ್ಯಮ ಶೀಲಾ ಜಾಗೃತಿ ಶಿಬಿರ ಹಾಗೂ ಅನ್ನಪೂರ್ಣ ಸ್ತ್ರೀ ಶಕ್ತಿ ಗೊಂಚಲು ಮತ್ತು ಮೂಕಾಂಬಿಕಾ ಸ್ತ್ರೀ ಶಕ್ತಿ ಗೊಂಚಲು ಸಂಯುಕ್ತ ಆಶ್ರಯದಲ್ಲಿ ನಡೆದ ಸ್ತ್ರೀ ಶಕ್ತಿ ಗುಂಪುಗಳ ಸರ್ವ ಸದಸ್ಯರ ಸಭೆ, ಜಿ.ಪಂ. ಸದಸ್ಯರಿಂದ ಅಂಗನವಾಡಿ ಕೇಂದ್ರಕ್ಕೆ ಕಪಾಟು ವಿತರಣ ಕಾರ್ಯಕ್ರಮ ಹಾಗೂ ಮಕ್ಕಳ ದತ್ತು ಪ್ರಕ್ರಿಯೆ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು. ಬ್ಯಾಂಕುಗಳಿಂದ ಸಾಲ ಪಡೆದು ಶೇ. 90ರಷ್ಟು ಮರು ಪಾವತಿ ಮಾಡುವ ಸಂಘಟನೆಯಿದ್ದರೆ ಅದು ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು ಮಾತ್ರ ಎಂದು ಅವರು ವಿವರಿಸಿದರು. ಸ್ವಸಹಾಯ ಸಂಘಗಳಿಗೆ ಅವರು ಕಪಾಟಿನೆ ಕೀಲಿ ಕೈಯನ್ನು ಈ ಸಂದರ್ಭ ಹಸ್ತಾಂತರಿಸಿದರು.
ನರಿಕೊಂಬು ಗ್ರಾಮಪಂಚಾಯತ್ ಅಧ್ಯಕ್ಷೆ ಸುಮತಿ ಸದಾನಂದ ಅಧ್ಯಕ್ಷತೆ ವಹಿಸಿದ್ದರು. ಜಿ.ಒಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ರೋಟರಿಕ್ಲಬ್ ಅಧ್ಯಕ್ಷ ಪ್ರಕಾಶ್ ಕಾರಂತ ತಾ.ಪಂ.ಸದಸ್ಯ ಆನಂದ ಶಂಭೂರು, ನರಿಕೊಂಬು ಗ್ರಾ.ಪಂ.ಉಪಾಧ್ಯಕ್ಷೆ ಸೌಮ್ಯ, ಸುಮಂಗಲ ಸಭಾಭವನದ ವ್ಯವಸ್ಥಾಪಕ ರಘು ಸಪಲ್ಯ, ಸಿಡಿಪಿಓ ಮಲ್ಲಿಕಾ, ಸೋಮಪ್ಪ ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಭಾರ ಮಕ್ಕಳ ಹಕ್ಕು ರಕ್ಷಣಾಧಿಕಾರಿ ಉಸ್ಮಾನ್ ಎ., ಕೈಗಾರಿಕ ವಿಸ್ತರಣಾಧಿಕಾರಿ ಬಾಲಕೃಷ್ಣ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಾಲಿನಿ ಸ್ವಾಗತಿಸಿದರು, ಪುಷ್ಪಲತಾ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *