ಬಂಟ್ವಾಳ: ನೆಹರೂ ಯುವ ಕೇಂದ್ರ ಮಂಗಳೂರು ಹಾಗೂ ಶ್ರೀ ದುರ್ಗಾ ಗೆಳೆಯರ ಬಳಗ ಶಿವಾಜಿನಗರ ಕಾಮಾಜೆ ಇದರ ವತಿಯಿಂದ ನಡೆದ ಶ್ರೀ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಪುರಸಭಾ ಸದಸ್ಯರಾದ ಭಾಸ್ಕರ ಟೈಲರ್ ಉದ್ಘಾಟಿಸಿದರು.
ಕಾಮಾಜೆ ಶ್ರೀ ಭಜನಾ ಮಂದಿರದ ಅಧ್ಯಕ್ಷ ಕೇಶವ ದೈಪಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಕಾರ್ಯಕರ್ತ ವಾಮನ್ ಭಾಗವಹಿಸಿದ್ದರು. ಶ್ರೀದುರ್ಗಾ ಗೆಳೆಯರ ಬಳಗದ ಅಧ್ಯಕ್ಷ ಯಾಧವ ಕಾಮಾಜೆ, ನೆಹರೂ ಯುವಕೇಂದ್ರದ ಪ್ರತಿನಿಧಿಗಳಾದ ಕೀರ್ತೀರಾಜ್ ನೀರುಮಾರ್ಗ, ಸುರೇಶ್ ಎಸ್. ನಾವೂರು ಉಪಸ್ಥಿತರಿದ್ದರು.
