ಬಂಟ್ವಾಳ:ಭಾನುವಾರ ಮಧ್ಯರಾತ್ರಿ ಬಂಟ್ವಾಳದಲ್ಲೂ ಗುಡುಗು ,ಮಿಂಚಿನ ಅಬ್ಬರ ಸಹಿತ ಧಾರಾಕಾರ ಮಳೆಯು ಸುರಿದಿದೆ.ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಬಂಟ್ವಾಳ ಪುರಸಭೆಯ ಜಕ್ರಿಬೆಟ್ಟುವಿನಲ್ಲಿರುವ  ಕುಡಿಯುವ ನೀರಿನ ಪಂಪ್ ಗೆ ಸಿಡಿಲು ಬಡಿದ ಪರಿಣಾಮ ಹಾನಿಯಾಗಿದ್ದು,ಸೋಮವಾರ ಬಂಟ್ವಾಳ ಪುರವಾಸಿಗಳಿಗೆ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಸಿಡಿಲಿನ ಅಬ್ಬರಕ್ಕೆ ಕೆಲ ಮನೆಗಳಲ್ಲಿ ಟಿ.ವಿ.,ಫ್ಯಾನ್ ಹಾನಿಯಾದ ಬಗ್ಗೆ ವರದಿಯಾಗಿವೆ.  ಹಾಗೆಯೇ ವಿದ್ಯುತ್ ಕೂಡ ಕಡಿತಗೊಂಡು ಮುಂಜಾನೆಯವರೆಗೂ ಕತ್ತಲಭಾಗ್ಯ.ನಂತರವು ವಿದ್ಯುತ್ ಕಣ್ಣಮುಚ್ಚಾಲೆಯಾಡುತಿತ್ತು.ಬಂಟ್ವಾಳದಂತಹ ನಗರ ಪ್ರದೇಶದಲ್ಲಿ  ಪ್ರತಿನಿತ್ಯ ಎಂಬಂತೆ ಮಧ್ಯರಾತ್ರಿ ವಿದ್ಯುತ್ ಕಡಿತಗೊಂಡರೆ ಬಳಿಕ ಮುಂಜಾನೆ ಉರಿಯುತ್ತದೆ.ಲೈನ್ ಫಾಲ್ಟ್ ಹೆಸರಲ್ಲಿ ಮೆಸ್ಕಾಂ ಗ್ರಾಹಕರಿಗೆ ಕತ್ತಲಭಾಗ್ಯದ ಶಾಕ್ ನೀಡುತ್ತಿದೆ.

By Suddi9

Leave a Reply

Your email address will not be published. Required fields are marked *