ಬಂಟ್ವಾಳ: ಕಟ್ಟೆಮಾರ್ ಶ್ರೀ ಧೂಮಾವತಿ ನಾಗದೇವರು ಚಾಮುಂಡಿ ಮತ್ತು ಪರಿವಾರ ದೈವಗಳ ತರವಾಡು ಕ್ಷೇತ್ರದಲ್ಲಿ ದೈವಗಳ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವಕ್ಕೆ ಮೇ 5ರಂದು ಬೆಳಿಗ್ಗೆ ಕಲ್ಲಡ್ಕ ಶ್ರೀರಾಮ ಮಂದಿರದಿಂದ ನಡೆದ ಹಸಿರುವಾಣಿ ಹೊರೆ ಕಾಣಿಕೆಯ ಮೆರವಣಿಗೆಯನ್ನು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿ.ಪಂ.ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್, ತಾ.ಪಂ. ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಸಮಿತಿ ಪದಾ„ಕಾರಿಗಳಾದ ಯೋಗೀಶ್ ಪೂಜಾರಿ ಕಡ್ತಿಲ, ಮೋಹನ ಕಟ್ಟೆಮಾರು, ಲೋಕಾನಂದ ಕಲ್ಲಕಟ್ಟ, ಜಯರಾಮ ಪೂಜಾರಿ, ಶಿವರಾಮ ಪೂಜಾರಿ ಗೋವಿಂದಕಟ್ಟೆ, ಭವಾನಿ ಕರುಣಾಕರ ಕೂಳೂರು, ಪೂವಪ್ಪ ಪೂಜಾರಿ ಬೊಳ್ಳುಕಲ್ಲು, ಎಸ್.ಎಸ್. ಕಟ್ಟೆಮಾರು, ಸುನಿಲ್‍ರಾಜ್, ಪದ್ಮನಾಭ ಪೂಜಾರಿ ತಿಂಗಳಾಡಿ, ಶಿವರಾಮ ಗೋವಿಂದಕಟ್ಟೆ, ಕಿಶೋರ್ ಕಟ್ಟೆಮಾರು, ಮನೋಹರ ದೇರಾಜೆ, ದಿನಕರ ಪೂಜಾರಿ ಕಡ್ತಿಲ ಸಹಿತ ಕಟ್ಟೆಮಾರು ಕುಟುಂಬಸ್ಥರು. ಇತರ ಪ್ರಮುಖರು ಪಾಲ್ಗೊಂಡಿದ್ದರು.
ದೊಡ್ಡ ಸಂಖ್ಯೆಯಲ್ಲಿ ವಿವಿಧ ವಾಹನಗಳಲ್ಲಿ ಹಸಿರುವಾಣಿ ಹೊರೆ ಮೆರವಣಿಗೆ ನಡೆಯಿತು. ರಮೇಶ್ ಕಲ್ಲಡ್ಕರ ಶಿಲ್ಪಾಗೊಂಬೆ ಬಳಗ, ಚೆಂಡೆ, ಭಜನೆ, ನಾಸಿಕ್ ಬ್ಯಾಂಡ್ ಮೊದಲಾದವರು ಮೆರವಣಿಗೆಗೆ ಮೆರಗು ನೀಡಿದರು.
