ಬಂಟ್ವಾಳ: ತಾಲೂಕಿನ ಪ್ರಸಿದ್ದ ದೈವ ನರ್ತಕ ಬಾಳ್ತಿಲ ಗ್ರಾಮ ಮುಲಾರು ನಿವಾಸಿ ಪದ್ಮನಾಭ ಪಂಬದ (೬೩)ರವರು ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಅಸ್ಪತ್ರೆಯೊಂದರಲ್ಲಿ ಮಂಗಳವಾರ ರಾತ್ರಿ ನಿಧನ ಹೊಂದಿದ್ದಾರೆ.ಇವರು ಪತ್ನಿ,೨ಗಂಡು,೧ಹೆಣ್ಣು ಮಕ್ಕಳ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಕಳದ ೪೦ ವರ್ಷಗಳಿಂದ ಕಾಂಪ್ರಬೈಲ್ ಉಳ್ಳಾಲ್ತಿ,ಸಜೀಪ ಮಾಗಣೆಯ ದೈವಗಳು ಸೇರಿದಂತೆ ನೆಟ್ಲ,ಕಡೇಶ್ವಾಲ್ಯ ಮೊದಲಾದ ದೈವಸ್ಥಾನಗಳಲ್ಲಿ ದೈವದ ನರ್ತನ ಸೇವೆ ಮಾಡುತ್ತಿದ್ದರು.ಇವರ ಈ ಸೇವೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸನ್ಮಾನ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.ಸಾಂತ್ವನ;ತಾಲೂಕಿನ ವಿವಿಧ ದೈವಸ್ಥಾನಗಳ ಆಡಳಿತ ಸಮಿತಿ ಪ್ರಮುಖರು,ಮಾಜಿ ಶಾಸಕರಾದ ರುಕ್ಮಯಪೂಜಾರಿ,ಪದ್ಮನಾಭ ಕೊಟ್ಟಾರಿ,ಬಾಬು ಶೆಟ್ಟಿ,ಎಳ್ತಿಮಾರು,ರಾಜೇಶ್ ನಾಯ್ಕ ಉಳಿಪಾಡಿಗುತ್ತು, ದಿನೇಶ ಅಮ್ಮೂರು,ಚೆನ್ನಪ್ಪ ಕೋಟ್ಯಾನ್ ಸೇರಿದಂತೆ ಹಲವಾರು ಗಣ್ಯರು ಮ್ರತರ ಅಂತಿಮ ದರ್ಶನ ಪಡೆದರು.

IMG-20170503-WA0013

By Suddi9

Leave a Reply

Your email address will not be published. Required fields are marked *