ಬಂಟ್ವಾಳ: ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್‍ನ ದಶಮಾನೋತ್ಸವದ ಅಂಗವಾಗಿ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಜಾನಪದ ಕಲೋತ್ಸವ-2017 ಚಿಣ್ಣರೋತ್ಸವ, ಪ್ರಶಸ್ತಿ ಪ್ರದಾನ, ನಾಟಕೋತ್ಸವವು ಮೇ 5ರಿಂದ 14ರವರೆಗೆ ಬಿ.ಸಿ.ರೋಡು ಗಾಣದಪಡ್ಪು ಮೈದಾನದಲ್ಲಿ ಪ್ರತಿ ದಿನ ಸಂಜೆ 3:30ರಿಂದ ರಾತ್ರಿ 10:30ರವರೆಗೆ ನಡೆಯಲಿದೆ ಎಂದು ಸಂಸ್ಥೆಯ ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ತಿಳಿಸಿದರು.

IMAG2288
ಬಿ.ಸಿ.ರೋಡು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 5ರಂದು 3:30ಕ್ಕೆ ಅನ್ನಪೂರ್ಣೇಶ್ವರೀ ಕಲಾಮಂಟಪದಲ್ಲಿ ರಾಜ್ಯ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಅವರಿಂದ ಜಾನಪದ ದಿಬ್ಬಣ ಉದ್ಘಾಟನೆ ನಡೆಯಲಿದ್ದು ರಾಜ್ಯ, ಹೊರರಾಜ್ಯದ ಜಾನಪದ ಕಲಾ ತಂಡಗಳು ದಿಬ್ಬಣದಲ್ಲಿ ಭಾಗವಹಿಸಲಿದೆ. ಸಂಜೆ 6ಕ್ಕೆ ಗಾಣದಪಡ್ಪು ಮೈದಾನದಲ್ಲಿ ರಾಣಿ ಅಬ್ಬಕ್ಕ ಕಲಾ ಮಂಟಪ ಉದ್ಘಾಟನೆ, ನಂತರ ಜಾನಪದ ಕಲೋತ್ಸವವವನ್ನು ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು. ಶ್ರೀ ಕಟೀಲು ಕ್ಷೇತ್ರದ ಅನುವಂಶಿಕ ಪ್ರಧಾನ ಅರ್ಚಕ ವÉೀದಮೂರ್ತಿ ಶ್ರೀ ಲಕ್ಷ್ಮೀ ನಾರಾಯಣ ಅಸ್ರಣ್ಣರು ಆಶೀರ್ವಚನ ನೀಡುವರು. ಚಿಣ್ಣರೋತ್ಸವ ಅಧ್ಯಕ್ಷ ಅಮೀಶ್ ಕುಮಾರ್ ಎಂ. ಅಧ್ಯಕ್ಷತೆ ವಹಿಸುವರು. ಸಚಿವರಾದ ಯು.ಟಿ.ಖಾದರ್, ಐವನ್ ಡಿಸೋಜ, ಸಂಸದ ನಳಿನ್ ಕುಮಾರ್ ಕಟೀಲು, ಗಣೇಶ್ ಕಾರ್ಣಿಕ್ ಮೊದಲಾದವರು ಭಾಗವಹಿಸುವರು. ಸಾಂಸ್ಕøತಿಕ ರಂಗದ ಪ್ರತಿಭಾನ್ವಿತ ಚಿಣ್ಣರಿಗೆ ಪ್ರಶಸ್ತಿ ಪ್ರದಾನ, ಜಾನಪದ ಕಲಾತಂಡಗಳಿಂದ ಜಾನಪದ ಝಲಕ್, ಚಿಣ್ಣರಲೋಕ ತಂಡದಿಂದ ಸ ರಿ ಗ ಮ ಪ ನಡೆಯಲಿದೆ.
ನಾಟಕೋತ್ಸವದಲ್ಲಿ ರಂಗಕಲಾವಿದರಾದ ಎಚ್.ಕೆ.ನಯನಾಡು, ರತ್ನದೇವ್ ಪುಂಜಾಲಕಟ್ಟೆ, ರಘುವೀರ ಆಲಾಡಿ, ಕೆ.ಆರ್.ದೇವದಾಸ್ ಕೊಡ್ಮಾನ್, ಗಿರೀಶ್ ಪೈ ಬಂಟ್ವಾಳ, ಗೋಪಾಲ್ ಅಂಚನ್, ರಮೇಶ್ ಕಲ್ಲಡ್ಕ ಅವರಿಗೆ ಸನ್ಮಾನ ನಡೆಯಲಿದೆ. ಹಾಗೆಯೇ ಪ್ರತೀ ದಿನ ನಾಡಿನ ಪ್ರಸಿದ್ಧ ಕಲಾ ತಂಡಗಳಿಂದ ಸಾಂಸ್ಕøತಿಕ ವೈಭವಗಳು ನಡೆಯಲಿದೆ ಎಂದ ಅವರು ವಿಶೇಷ ಆಕರ್ಷನೆಯಾಗಿ ಚಲನಚಿತ್ರ ನಟ, ನಟಿಯರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಸುದರ್ಶನ್ ಜೈನ್, ಪಿ.ಜಯರಾಮ ರೈ, ರೊನಾಲ್ಡ್ ಡಿಸೋಜ, ಸದಾನಂದ ನಾವೂರು, ಡಿ.ಎಂ.ಕುಲಾಲ್, ಅಮೀಷ್ ಕುಮಾರ್ ಎಂ. ಮೊದಲಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *