ಬಂಟ್ವಾಳ :ಕರೋಪಾಡಿ ಗ್ರಾ.ಪಂ.ಉಪಾಧ್ಯಕ್ಷ ಜಲೀಲ್ ಹತ್ಯಾ ಪ್ರಕರಣವನ್ನು ವಿಶೇಷ ಪೊಲೀಸರ ತಂಡ ಭೇದಿಸುವಲ್ಲಿ ಯಶಸ್ವಿಯಾಗಿದ್ದು,ಈಸಂಬಂದ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.ಕರೋಪಾಡಿಯ ರಾಜೇಶ್ ನಾಯಕ್,ಮಾಣಿಯ ನರಸಿಂಹ,ಪುತ್ತೂರು ತಾ.ನ ಪ್ರಜ್ವಲ್ ಪುಷ್ಪರಾಜ್,ರೋಶನ್,ಪುನೀತ್,ಸಚಿನ್ ಬಂಧಿತ ಆರೋಪಿಗಳು.ಕನ್ಯಾನದಲ್ಲಿ ಕೆಲ ಸಮಯದ ಹಿಂದೆ ಹಿಂದೂ ಯುವತಿಯೊಬ್ಬಳನ್ನು ಮುಸ್ಲಿಂ ಯುವಕನೊಬ್ಬ ಪ್ರೀತಿಸುತ್ತಿದ್ದ ಪ್ರಕರಣದಲ್ಲಿ ಜಲೀಲ್ ಯುವಕನ ಬೆಂಬಲಕ್ಕೆ ನಿಂತಿದ್ದ ಹಾಗೂ ರಾಜಕೀಯವಾಗಿಯು ಬೆಳೆಯುತ್ತಿರುವ ದ್ವೇಷದಿಂದ ಈ ಹತ್ಯೆ ನಡೆಸಲಾಗಿದೆ ಎಂದು ಪೊಲೀಸರ ತನಿಖೆಯಿಂದ ಬಯಲಿಗೆ ಬಂದಿದೆ.ಬಂಧಿತ ಆರೋಪಿಗಳನ್ನು ಶನಿವಾರ ನ್ಯಾಯಾಲಕ್ಕೆ ಹಾಜರು ಪಡಿಸುವ ನಿರೀಕ್ಷೆ ಇದೆ.ಕಳೆದವಾರ ಬೈಕ್ ನಲ್ಲಿ ಬಂದ ನಾಲ್ವರು ಮುಸುಕುದಾರಿಗಳುಪಂಚಾಯತ್ ಕಚೇರಿಗೆ ನುಗ್ಗಿ ಜಲೀಲ್ ಕಣ್ಣಿಗೆ ಖಾರದಪುಡಿ ಎರಚಿ ತಲವಾರಿನಿಂದ ಬರ್ಬರವಾಗಿ ಕಡಿದು ಕೊಲೆ ಗೈದಿದ್ದರು.

IMG-20170420-WA0097

By suddi9

Leave a Reply

Your email address will not be published. Required fields are marked *