ಬಂಟ್ವಾಳ : ನರಿಕೊಂಬು ಗ್ರಾ.ಪಂ. ಕೊಂಗಳಪಾದೆ ಹಿಂದೂ ರುದ್ರ ಭೂಮಿ ಕಾಮಗಾರಿ ನಿರ್ವಹಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ನೀಡಿದ ದೂರನ್ನು ಸಾರಾಸಗಟಾಗಿ ತಳ್ಳಿಹಾಕಿರುವ ದ.ಕ.ಜಿಲ್ಲಾ ಒಂಬುಡ್ಸ್‍ಮನ್ ಅರ್ಜಿದಾರರು ನೀಡಿದ ದೂರು ಸಾಬೀತಾಗಿಲ್ಲ ಎಂದು ಸ್ಪಷ್ಟ ಆದೇಶ ನೀಡಿದೆ.
ಸ್ಥಳೀಯ ನಿವಾಸಿ ಸುಂದರ ಪೂಜಾರಿ ಉದ್ಯೋಗ ಖಾತರಿ ಯೋಜನೆಯಂತೆ ಈ ಕಾಮಗಾರಿ ನಡೆದಿಲ್ಲ. ಗ್ರಾ.ಪಂ. ಅಭಿವೃದ್ದಿ ಅ„ಕಾರಿ, ಇಂಜಿನಿಯರ್, ಕೇಸ್ ವರ್ಕರ್, ಗುತ್ತಿಗೆದಾರ, ಪಂಚಾಯತ್ ಬಿಲ್ ಕಲೆಕ್ಟರ್ ಶಾಮೀಲಾಗಿ ಅಕ್ರಮ ಎಸಗಿದ್ದಾರೆ. ಅ„ಕಾರ ವ್ಯಾಪ್ತಿ ಮೀರಿ ಸರಕಾರದ ಹಣ ದುರುಪಯೋಗ ಮಾಡಿದ್ದಾರೆ ಎಂದು 2016 ನ. 8ರಂದು ದೂರು ನೀಡಿದ್ದರು.
ಈ ದೂರಿಗೆ ಸಂಬಂ„ಸಿ 2016 ನ. 24ರಂದು ತನಿಖೆ ನಡೆಸಿದ ಒಂಬುಡ್ಸ್‍ಮನ್ 12 ಮಂದಿ ಗ್ರಾಮಸ್ಥರು, ದೂರುದಾರರು, ಗ್ರಾಮೀಣಾಭಿವೃದ್ದಿ ಸಹಾಯಕ ನಿರ್ದೇಶಕರು, ಗ್ರಾ.ಪಂ. ಅಧ್ಯಕ್ಷರು, ಅಭಿವೃದ್ದಿ ಅ„ಕಾರಿ, ನರೇಗಾ ತಾಂತ್ರಿಕ ಅ„ಕಾರಿಯ ಉಪಸ್ಥಿತಿಯಲ್ಲಿ ಖುದ್ದು ಕಾಮಗಾರಿ ನಡೆದ ಸ್ಥಳ ತನಿಖೆ ಮತ್ತು ದಾಖಲೆ ಪರಿಶೀಲಿಸಿದ್ದರು. 2017 ಜ. 21ರಂದು ಅರ್ಜಿದಾರರ ಸಮ್ಮುಖದಲ್ಲಿ ಪುನರ್ ಸರ್ವೆ ನಡೆಸಲಾಗಿತ್ತು.
2016 ಫೆ. 10ರಿಂದ ಮೇ 16 ತನಕ ಕಾಮಗಾರಿಗೆ ಪಡೆದ ಹಣ, ನಡೆಸಿದ ಕೆಲಸ , ಅಳತೆ ಪುಸ್ತಕದಲ್ಲಿ ನೀಡಿದ ಮಾಹಿತಿ, ಭಾವಚಿತ್ರ, ಎಫ್‍ಟಿಒ ದಾಖಲಿಸಿದ ಅಂಕಿಅಂಶ ಸಮರ್ಪಕವಾಗಿದೆ ಎಂದು ಸ್ಪಷ್ಟಪಡಿಸಿದ್ದಾಗಿ ಲಿಖಿತ ಹೇಳಿಕೆ ಅ„ಕಾರಿ ಎದುರು ದೂರುದಾರರು ಒಪ್ಪಿಕೊಂಡಿದ್ದಾಗಿ ಲಿಖಿತ ನೀಡಿದ್ದಾಗಿ ತಿಳಿಸಿದ್ದಾರೆ.
ಕಾಮಗಾರಿ ಸ್ಥಳದಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರ ಬ್ಯಾಂಕು ಖಾತೆಗಳಿಗೆ ನಿಯಮಾನುಸಾರ ಕೂಲಿ ಪಾವತಿ ಆಗಿರುವುದು ಕಂಡು ಬಂದಿದೆ. ದೂರಿನಲ್ಲಿ ಫೆÇೀಟೊದಲ್ಲಿರುವ ವ್ಯಕ್ತಿಗಳು ಮತ್ತು ಉದ್ಯೋಗ ಚೀಟಿ ಹೊಂದಿ ಕೆಲಸ ನಿರ್ವಹಿಸಿದ ವ್ಯಕ್ತಿಗಳು ಹಾಗೂ ಹಣ ಪಡೆದ ವ್ಯಕ್ತಿಗಳು ಬೇರೆ ಬೇರೆ ಎನ್ನುವುದಕ್ಕೆ ಯಾವುದೇ ಪುರಾವೆ ದೊರೆತಿಲ್ಲ. ಅ„ಕಾರಿ/ ಸಿಬಂದಿ ವರ್ಗದವರು ಅಕ್ರಮ ಎಸಗಿರುವುದಾಗಿ ನೀಡಿರುವ ಹೇಳಿಕೆಯು ಪರಿಶೀಲನೆಯ ಸಂದರ್ಭ ನೀಡಿದ ದಾಖಲೆ ಮತ್ತು ಹೇಳಿಕೆ ಪರಿಶೀಲನೆಯಲ್ಲಿ ಸಾಬೀತಾಗಿಲ್ಲ ಎಂದಿದ್ದಾರೆ.
ದೂರುದಾರರು 2016 ನ. 24ರಂದು ಮೇಲಿನ ಮೂರು ದೂರುಗಳನ್ನು ಹಿಂಪಡೆದು ಖರ್ಚು ಮಾಡಿದ ಹಣದಷ್ಟು ಕೆಲಸ ಆಗಿಲ್ಲವೆಂದು ಅನುಮಾನ ನಿವೇದಿಸಿಕೊಂಡಿದ್ದರು. ಕಾಮಗಾರಿ ಅಳತೆ ಪುಸ್ತಕದಲ್ಲಿ ನಮೂದಿಸಿದ ಮೌಲ್ಯಮಾಪನ ಮತ್ತು ಪುನರ್ ಮೌಲ್ಯಮಾಪನಕ್ಕೆ ಶೇ. 1. 41 ವ್ಯತ್ಯಾಸ ಕಂಡು ಬಂದಿರುತ್ತದೆ. ಕಾಮಗಾರಿಯು ಮಳೆಗಾಲಕ್ಕೆ ಮುಂಚೆ ಮುಕ್ತಾಯವಾಗಿದ್ದು ಪರಿಶೀಲನೆ ನಂತರ ನಡೆದಿದೆ ಎಂದಿದ್ದಾರೆ.
ಒಟ್ಟಾರೆ ಅರ್ಜಿದಾರ ನೀಡಿದ ದೂರು ಸಾಬೀತಾಗಿಲ್ಲ ಎಂದು ಆದೇಶಿಸಿ ಸದ್ರಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಒಂಬುಡ್ಸ್‍ಮನ್ ಅಭಿವೃದ್ದಿ ಅ„ಕಾರಿಗೆ ನೀಡಿದ ಪ್ರತಿಯಲ್ಲಿ ತಿಳಿಸಿದೆ ಎಂದು ನರಿಕೊಂಬು ಗ್ರಾ.ಪಂ. ಅಧ್ಯಕ್ಷ, ರುದ್ರಭೂಮಿ ಸಮಿತಿ ಗೌ.ಅಧ್ಯಕ್ಷ ಯಶೋಧರ ಕರ್ಬೆಟ್ಟು, ರುದ್ರಭೂಮಿ ಅಭಿವೃದ್ದಿ ಸಮಿತಿ ಅಧ್ಯಕ್ಷ ರವೀಂದ್ರ ಸಪಲ್ಯ ದಾಖಲೆ ಸಹಿತ ನೀಡಿದ ಜಂಟಿ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *