ಬಿ.ಸಿ.ರೋಡ್:ಶಿಕ್ಷಣದ ಜೊತೆಗೆ ಉತ್ತಮ ಗುಣನಡತೆಗಳನ್ನು ಕಲಿಸಿಕೊಡಬೇಕಾಗಿರುವುದು ಇಂದಿನ ಅವಶ್ಯಕತೆಯಾಗಿದೆ. ವಿದ್ಯಾರ್ಥಿಗಳಲ್ಲಿ ಕಲಿಕೆಯ ಮನೋಭಾವನ್ನು ಬೆಳೆಸುವುದಲ್ಲದೆ ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸುಗಳಿಸಲು ವಿಶೇಷ ತರಬೇತಿ ಅಗತ್ಯವಾಗಿದೆ ಎಂದು ಸಾಮಾಜಿಕ ಧಾರ್ಮಿಕ ಮುಖಂಡ ಶ್ರೀ ಗೋಪಾಲಕ್ರಷ್ಣ ದೇವಸ್ಥಾನ ಮಂಚಿ ಇದರ ವ್ಯವಸ್ತಾಪನಾ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಹೇಳಿದರು.

ಅವರು ಬಿ.ಸಿ. ರೋಡಿನಲ್ಲಿ ನೂತನವಾಗಿ ಪ್ರಾರಂಭಗೊಂಡ ಪಂಜೆ ವಿದ್ಯಾಸಂಸ್ಥೆ ಬಂಟ್ವಾಳ ಇದರ ವತಿಯಿಂದ ಆರಂಭಗೊಂಡ ಅಧ್ಯಯನ ಮತ್ತು ತರಬೇತಿ ಕೇಂದ್ರವನ್ನು ರಾಯಲ್ ಕೋಚಿಂಗ್ ಸೆಂಟರ್ ಬಿ.ಸಿ.ರೋಡಿನಲ್ಲಿ ಸೋಮವಾರ ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯ ಅಭಿರುಚಿ ಜೋಡುಮಾರ್ಗದ ಸಂಚಾಲಕ ಮಹಾಬಲೇಶ್ವರ ಹೆಬ್ಬಾರ್ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರುವ ಆಂತರಿಕ ಶಕ್ತಿಯನ್ನು ಗುರುತಿಸಬೇಕಾಗಿದೆ. ಕಲಿಕೆಗೆ ಪೂರಕವಾದ ಮನೋಭಾವದೊಂದಿಗೆ ಸೂಕ್ತ ಮಾರ್ಗದರ್ಶನ ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ ಎಂದರು.
ತುಂಬೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ಕವಿ ವಿ.ಸುಬ್ರಮಣ್ಯ ಭಟ್, ಶ್ರೀ ರಾಮ ಸೌಹಾರ್ದಸಹಕಾರಿ ಸಂಘ ಕಲ್ಲಡ್ಕ ಇದರ ಅಧ್ಯಕ್ಷ ತಾ.ಪಂ ಸದಸ್ಯ ನಾರಾಯಣ ಶೆಟ್ಟಿ , ಪ್ರಿನ್ಸಿಪಾಲ್ ಸುಧೇಶ್ ಶೆಣೈ ಮಂಗಳೂರು, ಉಪನ್ಯಾಸಕಿ ರಶ್ಮಿ ಕೆ. ಎಫ್., ಶಿಕ್ಷಕ ಶರಣಪ್ಪ ,ಶಿಕ್ಷಕಿ ಶ್ರೀಮತಿ ಶಾಂತ ಉಪಸ್ಥಿತರಿದ್ದು ಶುಭ ಹಾರೈಸಿ ಮಾತನಾಡಿದರು.
ಕ.ಸಾ.ಪ. ಬಂಟ್ವಾಳ ನಿಕಟ ಪೂವ್ ಅಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಏ.3 ರಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಲಾಗುವುದು ಎಂದರು. ಕಲಾವಿದ ಮಂಜು ವಿಟ್ಲ ನಿರೂಪಿಸಿ ವಂದಿಸಿದರು.
