ಬಂಟ್ವಾಳ: ದೇವಾಲಯಗಳು ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೇಂದ್ರಗಳಾಗಿದ್ದು ನಮ್ಮೊಳಗಿನ ಹೃದಯದ ದೀಪ ಬೆಳಗಲು ಆತ್ಮಸಂಸ್ಕಾರದ ಅಗತ್ಯವಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಬಂಟ್ವಾಳ ಕಸ್ಬಾ ಗ್ರಾಮದ ಮಣಿ ಶ್ರೀ ದುರ್ಗಾಮಾತಾ ದೇವಿಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ದುರ್ಗೆ ಒಳ್ಳೆಯತತ್ವದ ಸಂಕೇತ. ನಮ್ಮ ಮನಸ್ಸಿನೊಳಗಿನ ರಾಕ್ಷಸನನ್ನು ನಾಶ ಪಡಿಸಿದರೆ ಅದು ದೇವಾಲವಾಗಲು ಸಾಧ್ಯವಿದೆ. ವಿಶ್ವವೇ ಒಂದು ಧರ್ಮ ಚಾವಡಿಯಾಗಿದ್ದರೂ ತುಳು ನಾಡಿನ ಮಣ್ಣಿನಲ್ಲಿರುವ ಧಾರ್ಮಿಕ ಶ್ರದ್ದೆಯನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.

BTW_APL20_2
ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿ ಕಳೆದ 15 ವರ್ಷಗಳಿಂದೀಚೆಗೆ ಧಾರ್ಮಿಕ ಪುನರುತ್ಥಾನದ ಕಾರ್ಯಗಳು ನಡೆಯುತ್ತಿದ್ದು ಅಲ್ಲಲ್ಲಿ ದೇವಸ್ಥಾನಗಳ ಜೀಣೋದ್ದಾರ, ಬ್ರಹ್ಮಕಲಶೋತ್ಸವ, ಧರ್ಮನೇಮ, ನಾಮಮಂಡಲಗಳನ್ನು ನಡೆಯುತ್ತಿವೆ. ಇದು ಆಶಾದಾಯಕ ಬೆಳವಣಿಗೆ ಎಂದರು.
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಪುರಸಭೆ ಮಾಜಿ ಅಧ್ಯಕ್ಷೆ ವಸಂತಿ ಚಂದಪ್ಪ, ಉದ್ಯಮಿಗಳಾದ ರೋಹಿನಾಥ ಪಾದೆಮನೆ, ಪುರಸಭೆ ಸದಸ್ಯ ಗಂಗಾಧರ, ಚಂಡ್ತಿಮರ್ ಶ್ರೀ ಮಹಾಲಿಂಗೇಶ್ವರ ಭಜನಾ ಮಂದಿರದ ಅಧ್ಯಕ್ಷ ಜನಾರ್ದನ ಚೆಂಡ್ತಿಮಾರ್, ವಿಜಯಕುಮಾರ್ ಅಲ್ಲಿಪಾದೆ, ಹರೀಶ್ ಕೋಟ್ಯಾನ್, ಮಾಜಿ ಸೈನಿಕ ನಾರಾಯಣ ಬಂಜನ್, ಬಾಬುಗೌಡ ಕೇಶವ ಗೌಡ, ಶೈಲಜಾ ಬಾಲಕೃಷ್ಣ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಬಿ. ವೇದಿಕೆಯಲ್ಲಿದ್ದರು. ದೇವಸ್ಥಾನದ ಅಭಿವೃದ್ದಿಗೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ಕುಲಾಲ್ ನಾವೂರು ಸ್ವಾಗತಿಸಿ, ಆಡಳಿತಿ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ ವಂದಿಸಿದರು. ರಾಜೀವ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *