ವಿಟ್ಲ: ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಇದರ ವತಿಯಿಂದ ಸಮಿತಿಯ ದಶಮಾನೋತ್ಸವ ಮತ್ತು ಸಂವಿದಾನ ಶಿಲ್ಪಿ ಡಾ|| ಬಿ ಆರ್ ಅಂಬೇಡ್ಕರ್ ರವರ 126 ನೇ ಜನ್ಮ ದಿನಾಚರಣೆಯನ್ನು ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸ್ಥಾಪಕಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು, ಸ್ಥಾಪಕ ಉಪಾಧ್ಯಕ್ಷ ಭಾಸ್ಕರ ನೆಲ್ಲಿಗುಡ್ಡೆ, ಸ್ಥಾಪಕ ಕಾರ್ಯದರ್ಶಿ ಮೋನಪ್ಪ ಸಾಲೆತ್ತೂರು, ಸ್ಥಾಪಕ ಜತೆ ಕಾರ್ಯದರ್ಶಿ ರಘು ನಾಯ್ಕ ದಡ್ಡಲ್ತಡ್ಕ ಹಾಗೂ ಕಾರ್ಯದರ್ಶಿ ಚಂದ್ರಶೇಖರ್ ಇವರನ್ನು ಸನ್ಮಾನಿಸಲಾಯಿತು.
