ವಿಟ್ಲ ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಇದರ ವತಿಯಿಂದ ಸಮಿತಿಯ ದಶಮಾನೋತ್ಸವ ಮತ್ತು ಸಂವಿದಾನ ಶಿಲ್ಪಿ ಡಾ|| ಬಿ ಆರ್ ಅಂಬೇಡ್ಕರ್ ರವರ 126 ನೇ ಜನ್ಮ ದಿನಾಚರಣೆಯನ್ನು ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕಿ ಶಕುಂತಳಾ ಶೆಟ್ಟಿ ಉದ್ಘಾಟಿಸಿದರು. ಸಮಿತಿಯ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

SHV_1292

SHV_1316

ಶ್ರೀ ಕ್ಷೇತ್ರ ಬಾಳೆಕೋಡಿ ಕನ್ಯಾನ ಇಲ್ಲಿನ ಪರಮಪೂಜ್ಯ ಶ್ರೀ ಶ್ರೀ ಸದ್ಗುರು ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸುದರ್ಶನ ಪಡಿಯಾರ್, ವಿಟ್ಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ ಮತ್ತು ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಾವತಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸ್ಥಾಪಕಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು, ಸ್ಥಾಪಕ ಉಪಾಧ್ಯಕ್ಷ ಭಾಸ್ಕರ ನೆಲ್ಲಿಗುಡ್ಡೆ, ಸ್ಥಾಪಕ ಕಾರ್ಯದರ್ಶಿ ಮೋನಪ್ಪ ಸಾಲೆತ್ತೂರು, ಸ್ಥಾಪಕ ಜತೆ ಕಾರ್ಯದರ್ಶಿ ರಘು ನಾಯ್ಕ ದಡ್ಡಲ್ತಡ್ಕ ಹಾಗೂ ಕಾರ್ಯದರ್ಶಿ ಚಂದ್ರಶೇಖರ್ ಇವರನ್ನು ಸನ್ಮಾನಿಸಲಾಯಿತು. ರಾಮಣ್ಣ ಪಿಲಿಂಜ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಶೇಖರ್ ಪ್ರಸ್ತಾವಿಸಿ ವಂದಿಸಿದರು. ಮೋಹನ ಸರವೂರು ಕಾರ್ಯಕ್ರಮ ನಿರೂಪಿಸಿದರು. ಪ್ರತೀಕ್ಷಾ ಮತ್ತು ಚೈತನ್ಯ ಸಹಕರಿಸಿದರು.

By Suddi9

Leave a Reply

Your email address will not be published. Required fields are marked *