ಸುದ್ದಿ9ಮೂಡುಬಿದರೆ: ಲಕ್ಕೀ ಸ್ಕೀಂ ಹೆಸರಿನಲ್ಲಿ ಬೆಳ್ತಂಗಡಿ ಮತ್ತು ಕಾರ್ಕಳದಲ್ಲಿ ಗ್ರಾಹಕರಿಗೆ ಕೋಟ್ಯಾಂತರ ರೂ ಪಂಗನಾಮ ಹಾಕಿದ ವಾರಿಧಿ ಎಂಟರ್ಪ್ರೈಸಸ್ ಸಂಸ್ಥೆ ಮೂಡುಬಿದಿರೆಯಲ್ಲು ಸಾವಿರಾರು ಗ್ರಾಹಕರಿಗೆ ಟೋಪಿ ಹಾಕಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಇಲ್ಲಿನ ಮಾಕರ್ೆಟ್ ಹಿಂಬದಿಯ ಪದ್ಮ ಕಾಂಪ್ಲೆಕ್ಸ್ನಲ್ಲಿ ಗೃಹೋಪಯೋಗಿ ವಸ್ತುಗಳ ಮಾರಾಟಕ್ಕೆಂದು ಪುರಸಭೆಯಿಂದ 8 ತಿಂಗಳ ಹಿಂದೆ ಪರವಾನಿಗೆ ಪಡಕೊಂಡಿದ್ದ ವಾರಿಧಿ ಎಂಟರ್ಪ್ರೈಸಸ್ ವಾರಕ್ಕೆ 100 ರೂಪಾಯಿಯಂತೆ 52 ವಾರ ಕಂತು ಕಟ್ಟಿ ಬಹುಮಾನ ಗೆಲ್ಲುವ ಸ್ಕೀಂ ಆರಂಭಿಸಿತ್ತು. ಮೂಡುಬಿದಿರೆಯಲ್ಲಿ 30 ಏಜೆಂಟರು ನೇಮಕಗೊಂಡಿದ್ದು ಸಾವಿರಾರು ಗ್ರಾಹಕರನ್ನು ಈ ಸ್ಕೀಂಗೆ ಸೇರ್ಪಡೆಗೊಳಿಸಿದ್ದರು. ಏಜೆಂಟರಿಗೆ 15 ಶೇಖಡಾ ಕಮಿಷನ್ನಿನ ಭರವಸೆ ನೀಡಲಾಗಿತ್ತು. ಬೈಕ್, ಸ್ಕೂಟಿ, ಎಲ್ಸಿಡಿ ಟಿವಿ ಅಲ್ಲದೆ ಜನಾಕರ್ಷಣೆಯ ಗೃಹೋಪಯೋಗಿ ವಸ್ತುಗಳನ್ನು ಗೆಲ್ಲುವ ಯೋಜನೆ ಇದಾಗಿತ್ತು.

ಒಂದು ಸ್ಕೀಂ ಚಾಲ್ತಿಯಲ್ಲಿರುವಾಗಲೇ 30 ಕಂತಿನ ಇನ್ನೊಂದು ಸ್ಕೀಂನ್ನು ಸಂಸ್ಥೆ ಆರಂಭಿಸಿತ್ತು. ಇತ್ತೀಚಿಗೆ ಬೆಳ್ತಂಗಡಿಯಲ್ಲಿರುವ ಸಂಸ್ಥೆಯ ಕಛೇರಿಗೆ ಗ್ರಾಹಕರು ನುಗ್ಗಿ ಗಲಾಟೆ ಆರಂಭಿಸಿದ ಬೆನ್ನಿಗೆ ಸಂಸ್ಥೆಯ ಮಾಲಕರು ಕಾರ್ಕಳ ಹಾಗೂ ಮೂಡುಬಿದಿರೆ ಕಛೇರಿಗೆ ಬೀಗ ಜಡಿದು ಇಲ್ಲಿಂದ ಕಾಲ್ಕಿತ್ತಿದ್ದಾರೆ. ಆ ಹೊತ್ತಿಗೆ ಮೊದಲ ಸ್ಕೀಂನ 35 ಕಂತುಗಳಷ್ಟೆ ಡ್ರಾ ಆಗಿತ್ತು. ಅಂಗಡಿಗೆ ಬೀಗ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಹಕರು ಕಛೇರಿ ಮುಂದೆ ಜಮಾಯಿಸಿ ಆಕ್ರೋಶ ಮತ್ತು ಅಸಹಾಯಕತೆ ತೋಡಿಕೊಂಡಿದ್ದಾರೆ. ಸಂಸ್ಥೆಯಿಂದ ವಚನೆಗೊಳಗಾದವರು ಹಣ ಹಿಂತಿರುಗಿಸುವಂತೆ ಏಜೆಂಟರ ಬೆನ್ನು ಬಿದ್ದಿದ್ದಾರೆ. ಗುರುವಾರ ಕಛೇರಿ ಮುಂದೆ ಗ್ರಾಹಕರು ಜಮಾಯಿಸಿ ಮುಂದೇನು ಮಾಡುವುದೆಂದು ಚಚರ್ಿಸಿದರೂ ಸ್ಪಷ್ಟ ನಿಧರ್ಾರಕ್ಕೆ ಬರಲಿಲ್ಲ. ಭಾನುವಾರ ಏಜೆಂಟರು ಮತ್ತು ಗ್ರಾಹಕರು ಮತ್ತೆ ಸಭೆ ಸೇರಿ ಪೊಲೀಸರಿಗೆ ದೂರು ಕೊಡಲು ನಿರ್ಧರಿಸಿದ್ದಾರೆ. ಕಛೇರಿಗೆ ವಾರಿಧಿ ಭೀಗ ಹಾಕಿದ್ದರೆ ಅದರ ಗ್ರಾಹಕರು ಇನ್ನೊಂದು ಬೀಗ ಜಡಿದಿದ್ದಾರೆನ್ನಲಾಗಿದೆ. ಗ್ರಾಹಕರಿಗೆ ವಂಚಿಸಿದ ಮೊತ್ತದ ವಿವರ ತಿಳಿದುಬಂದಿಲ್ಲವಾದರೂ ಒಬ್ಬನೆ ಏಜೆಂಟ್ ತನ್ನ ಸದಸ್ಯರಿಗೆ ಅಂದಾಜು 2 ಲಕ್ಷ ರೂಪಾಯಿ ಕೊಡಬೇಕಾಗಿದೆ ಎಂದು ತಿಳಿದುಬಂದಿದೆ. ಕಛೇರಿ ನಿವರ್ಾಹಕಿ ತನ್ನ ಮೊಬೈಲ್ ಸಂಖ್ಯೆಯನ್ನು ಗ್ರಾಹಕರಿಗೆ ನೀಡಬಾರದೆಂದು ತನ್ನ ಆಪ್ತರಿಗೆ ತಿಳಿಸಿದ್ದಾಳೆನ್ನಾಗಿದೆ.
ಹೋಂ ನೀಡ್ಸ್ನಿಂದ ಟೋಪಿ:ಹಲವು ವರ್ಷಗಳ ಹಿಂದೆ ಅಮರಶ್ರೀ ಟಾಕೀಸ್ ಬಳಿ ಇದೇ ರೀತಿ ತಮಿಳ್ನಾಡು ಮೂಲದವರು ಹೋಮ್ ನೀಡ್ಸ್ ಹೆಸರಿನಲ್ಲಿ ಸಂಸ್ಥೆಯೊಂದನ್ನು ತೆರೆದು ಮೂಡುಬಿದಿರೆಯ ಗ್ರಾಹಕರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿ ಪರಾರಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

04

 

 

By suddi9

Leave a Reply

Your email address will not be published. Required fields are marked *