ಮೂಡುಬಿದರೆ:  ವ್ಯಾಟಿಕನ್ಸಿಟಿಯ ಕಥೋಲಿಕ್ ಬಿಷಪ್ ಕಾನ್ಫರೆನ್ಸ್ ಇಂಡಿಯಾ ಹಾಗೂ ಏಷ್ಯಾ( ಸಿಬಿಸಿಐ ಅಧ್ಯಕ್ಷ ಆಚರ್್ ಬಿಷಪ್ ಫೆಲಿಕ್ಸ್ ಮೆಚಾಡೋ ಗುರುವಾರ ಮೂಡುಬಿದರೆ ಶ್ರೀಜೈನಮಠಕ್ಕೆ ಭೇಟಿ ನೀಡಿ ಭಟ್ಟಾರಕ ಚಾರುಕೀತರ್ಿ ಸ್ವಾಮೀಜಿಯವರೊಂದಿಗೆ ಸಮಾಲೋಚನೆ ನಡೆಸಿದರು.

ಮೂಡುಬಿದರೆ ಜೈನಮಠಕ್ಕೆ ವ್ಯಾಟಿಕನ್ಸಿಟಿ ಬಿಷಪ್ ಭೇಟಿ ಜೈನ ಸ್ವಾಮೀಜಿ ಜತೆ ಸಮಾಲೋಚನೆ ನಡೆಸಿದರು

mbd_july17_14(a) (1)

mbd_july17_14

2004ರಲ್ಲಿ ಪಾಸರ್ಿಲೋಮನದಲ್ಲಿ ನಡೆದ ವಿಶ್ವ ಶಾಂತಿ ಸಮ್ಮೇಳನದ ನಂತರ ಉಂಟಾಗಿರುವ ಭಾಂದವ್ಯದ ಸಂಕೇತವಾಗಿ ಎರಡು ಕಡೆಯವರ ನಡುವೆ ಶುಭಾಶಯ ವಿನಿಮಯ ನಡೆಯುತ್ತಿದ್ದು, ದಿಗಂಬರ ಆಚಾರ್ಯ ಶಾಂತಿ ಸಾಗರ ಅವರ 143ನೇ ಜನ್ಮ ಜಯಂತಿಯ ದಿನದಂದೇ ಈ ಸೌಹಾರ್ದ ಭೇಟಿ ನಡೆದಿರುವುದು ಗಮನಾರ್ಹ ಎಂದ ಅವರು ಅನ್ಯಧಮರ್ಿಯರ ಉತ್ತಮ ಅಂಶಗಳನ್ನು ಗೌರವಿಸುವುದು ಅಗತ್ಯ ಎಂದು ಜೈನ ಸ್ವಾಮಿಜಿ ಅಭಿಪ್ರಾಯಪಟ್ಟರು.
ಜೈನಕಾಶಿ ಹಾಗೂ ಭಟ್ಟಾರಕರ ಅತೀಥ್ಯ ತಮಗೆ ಸಂತಸ ನೀಡಿದೆ ಎಂದ ಬಿಷಪ್, ಭಗವಾನ್ ಮಹಾವೀರರು ವಿಶ್ವಶಾಂತಿಗೆ ನೀಡಿದ ಕೊಡುಗೆ ಮತ್ತು ಅವರ ಬೋಧನೆಗಳಿಂದ ತಾವು ಪ್ರಭಾವಿತರಾಗಿರುವುದಾಗಿ ತಿಳಿಸಿದರು. ಜೈನ ಮತ್ತು ಕ್ರೈಸ್ತ ಭಾಂಧವ್ಯ ಭಾರತ ಮಾತೆಯ ಶಾಂತಿಗೆ ಕೊಡುಗೆಯಾಗಬೇಕೆಂದು ಅಭಿಪ್ರಾಯಪಟ್ಟರು. ಬಿಷಪ್ ಅವರು 2015ರಲ್ಲಿ ಚಿಕಾಗೋದಲ್ಲಿ ನಡೆಯಲಿರುವ ಜಾಗತಿಕ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಮೂಡುಬಿದರೆಯಲ್ಲಿ ರಾಷ್ಟ್ರೀಯ ಸರ್ವಧರ್ಮ ಸಮ್ಮೇಳನ ನಡೆಸುವ ಬಗ್ಗೆ ಸಮಾಲೋಚನೆ ನಡೆಸಿದರು.

ಮಂಗಳೂರಿನ ವೆಲೇರಿಯನ್ ಹಾಗೂ ಮೂಡುಬಿದರೆಯ ಸ್ವಸ್ತಿಶ್ರೀ ಕಾಲೇಜಿನ ಪ್ರಾಂಶುಪಾಲ ಪಾ.ಅನಂತರಾಜ್ ಇಂದ್ರ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *