ಮೂಡುಬಿದರೆ : ಕಲ್ಲಮುಂಡ್ಕೂರು ಪೇಟೆಯಲ್ಲಿರುವ ನ್ಯೂ ಸೌರಭ ಜ್ಯುವೆಲ್ಲರ್ಸ್ಗೆ ಸೋಮವಾರ ರಾತ್ರಿ ನುಗ್ಗಿರುವ ಕಳ್ಳರು 24ಸಾವಿರ ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣಗಳನ್ನು ಕಳವುಗೈದಿದ್ದಾರೆ.

mbd_july15_1 (1)

mbd_july15_1 (2)

ಮಂಗಳವಾರ ಬೆಳಿಗ್ಗೆ ಚಿನ್ನದ ಅಂಗಡಿ ತೆರೆಯುವ ವೇಳೆ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ಅಂಗಡಿಯ ಶಟರನ್ನು ಜಾಕ್ ಮೂಲಕ ಮೇಲೆತ್ತಿ ಒಳಪ್ರವೇಶಿಸಿರುವ ಕಳ್ಳರು ಶೋಕೇಸ್ನಲ್ಲಿದ್ದ ಬೆಳ್ಳಿಯ ತಂಬಿಗೆ, ಕಾಲುಂಗುರ, ಕಾಲುಚೈನುಗಳನ್ನು ಕದ್ದೊಯ್ದಿದ್ದಾರೆ. ಸೇಫ್ ಲಾಕರ್ನ ಬೀಗ ಒಡೆಯಲು ಕಳ್ಳರು ವಿಫಲರಾಗಿರುವುದರಿಂದ ಚಿನ್ನಾಭರಣಗಳು ಸುರಕ್ಷಿತವಾಗಿವೆ. ಶೋಕೇಸ್ನಲ್ಲಿದ್ದ ಕಂಚಿನ ಪ್ರಬಾವಳಿ, ಚಿನ್ನದ ಲೇಪನದ ಸರಗಳನ್ನು ಹಾಗೆಯೇ ಬಿಟ್ಟು ಹೋಗಿದ್ದಾರೆ. ಕಲ್ಲಮುಂಡ್ಕೂರು ಪೇಟೆಯಲ್ಲಿ ಸೋಮವಾರ ರಾತ್ರಿ ಮೆರೂನ್ ಬಣ್ಣದ ಮಾರುತಿ ಕಾರು ನಿಂತಿದ್ದ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜ್ಯುವೆಲ್ಲರಿ ಮಾಲಕ ಯೋಗೀಶ್ ಆಚಾರ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಸರ್ಕಲ್ ಇನ್ಸ್ಫೆಕ್ಟರ್ ಅನಂತಪದ್ಮನಾಭ ಸಬ್ ಇನ್ಸ್ಪೆಕ್ಟರ್ ರಮೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ

By suddi9

Leave a Reply

Your email address will not be published. Required fields are marked *