ಮೂಡುಬಿದರೆ: ಸೈನ್ಯಕ್ಕೆ ಸೇರುವವರ ಸಂಖ್ಯೆ ಕಡಿಮೆಯಾಗಿರುವುದರಿಂದ ಸೇನಾ ನೇಮಕಾತಿಯಲ್ಲಿ ನಮ್ಮ ರಾಜ್ಯಕ್ಕೆ ಮೀಸಲಿಟ್ಟ ಸ್ಥಾನಗಳು ಬೇರೆ ರಾಜ್ಯದ ಪಾಲಾಗುತ್ತಿದೆ. ಗ್ರಾಮೀಣ ಪ್ರದೇಶದ ಯುವಕರಿಗೆ ಸೈನ್ಯದ ಬಗ್ಗೆ ಮಾಹಿತಿ, ತರಬೇತಿ ನೀಡಿ ಜಾಗೃತಿ ಮೂಡಿಸಿದಲ್ಲಿ ಸೇನಾ ನೇಮಕಾತಿಯಲ್ಲಿ ರಾಜ್ಯದ ಯುವಕರ ಸಂಖ್ಯೆ ಏರಿಕೆಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾಣರ್ಿಕ್ ಅಭಿಪ್ರಾಯಪಟ್ಟರು.

ಮೂಡುಬಿದರೆಯಲ್ಲಿ ಅಗಸ್ಟ್ 5 ರಿಂದ 12 ರವರೆಗೆ ಸೇನೆಗೆ ಸೇರಬಯಸುವ ಯುವಕರಿಗೆ ನೇರ ನೇಮಕಾತಿ ರ್ಯಾಲಿಯ ಪೂರ್ವಭಾವಿಯಾಗಿ, ಮೂಡುಬಿದರೆ ಮಾಜಿ ಸೈನಿಕರ ವೇದಿಕೆ ಆಶ್ರಯದಲ್ಲಿ ಸಮಾಜಮಂದಿರದಲ್ಲಿ ಭಾನುವಾರ ನಡೆದ ಸೇನಾ ರ್ಯಾಲಿಯ ಮಾಹಿತಿ ಶಿಬಿರವನ್ನು ಕಾಣರ್ಿಕ್ ಉದ್ಘಾಟಿಸಿದರು. ಸೈನ್ಯದ ಬಗ್ಗೆ ಅಸ್ಪಷ್ಟ ಮಾಹಿತಿಗಳಿಂದ ಪೋಷಕರು ತಮ್ಮ ಮಕ್ಕಳನ್ನು ಸೈನ್ಯಕ್ಕೆ ಸೇರಿಸಲು ಹಿಂಜರಿಯುತ್ತಿದ್ದಾರೆ. ಅವರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಮಾನವ ಜೀವನದಲ್ಲಿ ಸಾವು ಸಹಜ ಪ್ರಕ್ರಿಯೆ. ಅದರಲ್ಲಿ ದೇಶಕ್ಕಾಗಿ ಹುತಾತ್ಮನಾಗುವುದು ಭಾಗ್ಯವೆಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮುಖ್ಯ ಅತಿಥಿಯಾಗಿ ಮಾತನಾಡಿ, ಶಿಸ್ತಿನ ಜೀವನವನ್ನು ಸೈನ್ಯ ಕಲಿಸುತ್ತದೆ ಎಂದರು.
ಮಾಜಿ ಸೈನಿಕರಾದ ಪ್ರೊ.ಚೆರಿಯನ್, ವೇಣೂರು ಎಸ್ಡಿಎಂ ಐಟಿಐನ ನೇಮಕಾತಿ ಅಧಿಕಾರಿ ಎಂ.ಆರ್.ಜೈನ್, ಉಡುಪಿ ಮಾಜಿ ಸೈನಿಕರ ವೇದಿಕೆ ಅಧ್ಯಕ್ಷ ಗಿಲ್ಬಟರ್್ ಬ್ರಿಗಾಂಝ ಸಂಪನ್ಮೂಲ ವ್ಯಕ್ತಿಗಳಾಗಿ ಶಿಬಿರಾಥರ್ಿಗಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿಯ ನಡೆಸಿಕೊಟ್ಟರು. ದೈಹಿಕ, ಆರೋಗ್ಯದ ತರಬೇತಿ ಬಗ್ಗೆ ಹಾಗೂ ಲಿಖಿತ ಪರೀಕ್ಷೆಗಳ ಮಾದರಿ ಪ್ರಶ್ನೆ ಪತ್ರಿಕೆಯ ಬಗ್ಗೆ ಮಾಹಿತಿ ನೀಡಲಾಯಿತು. ನೇಮಕಾತಿ ಬೇಕಾದ ಪ್ರಮಾಣ ಪತ್ರಗಳ ಬಗ್ಗೆಯೂ ತಿಳಿಸಲಾಯಿತು.
ಕಲ್ಲಬೆಟ್ಟು ಎಕ್ಸಲೆಂಟ್ ಪ.ಪೂ.ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ವೇದಿಕೆ ಅಧ್ಯಕ್ಷ ರಾಮಚಂದ್ರ ನಾಯಕ್ ಸ್ವಾಗತಿಸಿದರು. ಪ್ರಧಾನ ಕಾರ್ಯದಶರ್ಿ ವಿಜಯ್ ಫೆನರ್ಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ನಿದರ್ೇಶಕ ಡೆನ್ನಿಸ್ ವಂದಿಸಿದರು.
