ಸುದ್ದಿ9ಬಂಟ್ವಾಳ: ತಾಲೂಕಿಗೆ ಮಂಜೂರಾದ ರೈತ ಸಂಪರ್ಕ ಕೇಂದ್ರದ ನಿರ್ಮಾಣಕ್ಕೆ ದ.ಕಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಬಿ.ಸಿ.ರೋಡಿನ ಕೃಷಿ ಇಲಾಖೆಯ ಕಛೇರಿ ಸಮೀಪ ಶನಿವಾರ ಶಿಲಾನ್ಯಾಸ ನೆರವೇರಿಸಿದರು. ಸುಮಾರು 38 ಲಕ್ಷ ರೂ. ವೆಚ್ಚದಲ್ಲಿ ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಲಿ. ಈ ಕೇಂದ್ರವನ್ನು ನಿರ್ಮಿಸಲಿದೆ. ದ.ಕ ಜಿಲ್ಲೆಯ 2 ತಾಲೂಕಿಗೆ ರೈತ ಸಂಪರ್ಕ ಕೇಂದ್ರವು ಮಂಜೂರಾಗಿದ್ದು ಇನ್ನೊಂದು ಕೊಕ್ಕಡದಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೆ. ಆರ್.ಡಿ.ಎಲ್.ನ ಎಕ್ಸಿಕ್ಯೂಟಿವ್ ಇಂಜಿನಿಯರ್ ಶೇಷಾದ್ರಿ, ನಾಗರಾಜಯ್ಯ, ಕೃಷಿಕ ಸಮಾಜದ ಅಶೋಕ್ ಕುಮಾರ್ ಬರಿಮಾರ್, ಬಂಟ್ವಾಳ ತಾ.ಪಂ.ನ ಮಾಜಿ ಅಧ್ಯಕ್ಷ ಪದ್ಮನಾಭ ರೈ, ತಾ.ಪಂ.ನ ಸ್ಥಾಯಿ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ತಾ.ಪಂ. ಸದಸ್ಯ ಪದ್ಮಶೇಖರ ಜೈನ್, ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಕಾಂಗ್ರೆಸ್ ಮುಖಂಡ ಪಿಯೂಸ್ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.

002r

By Suddi9

Leave a Reply

Your email address will not be published. Required fields are marked *