ಸುದ್ದಿ9ಬಂಟ್ವಾಳ: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಯಲ್ಲಿ ಗರಿಷ್ಠ ಅಂಕ ಗಳಿಸಿದ ನಾಲ್ವರು ವಿದ್ಯಾಥರ್ಿನಿಗಳಿಗೆ ಶಿಕ್ಷಣ ಇಲಾಖೆಯಿಂದ ಕಂಪ್ಯೂಟರ್ ವಿತರಿಸಲಾಯಿತು. ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾ.ಪಂ.ನ ತರಬೇತಿ ಭವನದಲ್ಲಿ ಶನಿವಾರ ನಡೆದ ಸರಳ ಸಮಾರಂಭದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ವಿದ್ಯಾಥರ್ಿನಿಗಳಾದ ಕೊಯಿಲ ಸ.ಪ್ರೌ ಶಾಲೆಯ ಸ್ವಾತಿ, ಬೆಂಜನಪದವು ಸ.ಪ.ಪೂ. ಕಾಲೇಜಿನ ಚೈತ್ರ, ಕನ್ಯಾನ ಸ.ಪ.ಪೂ. ಕಾಲೇಜಿನ ಸುಪ್ರತಿ ಹಾಗೂ ನಾವೂರು ಸ.ಪ್ರೌ ಶಾಲೆಯ ಸುಜಾತರವರಿಗೆ ಕಂಪ್ಯೂಟರ್ ವಿತರಿಸಿದರು.
ಶಾಲಾ ಮಕ್ಕಳ ದಾಖಲಾತಿ ಆಂದೋಲನ:
ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವರು ಶಾಲೆಯಿಂದ ಹೊರಗುಳಿದ ವಿದ್ಯಾಥರ್ಿಗಳನ್ನು ಮರಳಿ ಶಾಲೆಗೆ ಸೇರಿಸುವ ವಿಶೇಷ ದಾಖಲಾತಿ ಆಂದೋಲನವು ಈಗಾಗಲೇ ಆರಂಭಗೊಂಡಿದ್ದು ಜು.31ರವರೆಗೆ ನಡೆಯಲಿದೆ. ಈ ಆಂದೋಲನಕ್ಕೆ ತಾಲೂಕಿನ ಸ್ವಯಂಸೇವ ಸಂಸ್ಥೆಗಳು, ಜನಪ್ರತಿನಿಧಿಗಳು, ಶಾಲಾ ಶಿಕ್ಷಕರು, ಎಸ್ಡಿಎಂಸಿ ಸಮಿತಿ ಪದಾಧಿಕಾರಿಗಳು ಸಹಕರಿಸುವಂತೆ ಕೋರಿದರು. ತಾಲೂಕಿನಲ್ಲಿ ಜು.22ರಂದು ಸಜಿಪಮೂಡ ಗ್ರಾಮದಲ್ಲಿ ಮಕ್ಕಳ ದಾಖಲಾತಿ ಆಂದೋಲನಕ್ಕೆ ಚಾಲನೆ ದೊರೆಯಲಿದೆ ಎಂದರು.
ಇದೇ ವೇಳೆ 2001-14ರವರೆಗಿನ ಸರ್ವಶಿಕ್ಷಣಾ ಅಭಿಯಾನದಡಿ ನಡೆದ ವಿವಿಧ ಚಟುವಟಿಕೆಯ ಸಾಕ್ಷ್ಯಚಿತ್ರದ ಸಿ.ಡಿ ಹಾಗೂ 2012-13ರಲ್ಲಿ ನಡೆದ `ಚಿನ್ನರ ಕೃಷಿ ದರ್ಶನದ ಪಕ್ಷಿನೋಟ’ ಕ್ಯಾಲೆಂಡರ್ನ್ನು ಸಚಿವ ರಮಾನಾಥ ರೈ ಅವರು ಅನಾವರಣಗೊಳಿಸಿದರು. ತಾ.ಪಂ. ಅಧ್ಯಕ್ಷ ಯಶವಂತ ದೇರಾಜೆ, ಉಪಾಧ್ಯಕ್ಷೆ ವಿಲಾಸಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಂಪತ್ಕುಮಾರ್ ಶೆಟ್ಟಿ ತಾ.ಪಂ. ಸದಸ್ಯ ಪದ್ಮಶೇಖರ ಜೈನ್, ಜಿ.ಪಂ. ಸದಸ್ಯರಾದ ಎಂ.ಎಸ್. ಮಹಮ್ಮದ್, ಸರಸ್ವತಿ ಕಾಮತ್, ಡಯೆಟ್ ಪ್ರಾಂಶುಪಾಲರಾದ ಪಾಲಕ್ಷಪ್ಪ, ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕಮಲಾಕ್ಷ ಮೊದಲಾದವರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಸ್ವಾಗತಿಸಿ, ವಂದಿಸಿದರು.

