ಬಂಟ್ವಾಳ; ಬಂಟ್ವಾಳ ವಲಯ ಕಥೋಲಿಕ ಸಭಾ  ಮಂಗ್ಳೂರ್ ಪ್ರದೇಶ್ (ರಿ) ಇದರ ರಜತಮಹೋತ್ಸವವು ಮೊಡಂಕಾಪು ಆನುಗ್ರಹ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.  ವಿಧಾನ ಪರಿಷತ್  ಸದಸ್ಯರಾದ  ಐವನ್ ಡಿಸೋಜರವರು  ಸಮಾರಂಭವನ್ನು ಉದ್ಘಾಟಿಸಿದರು.

DSC00346ಬಳಿಕ ಮಾತನಾಡಿದ ಅವರು, ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಕೆಥೂಲಿಕ್ ಸಬಾ ರಜತಮಹೋತ್ಸವವನ್ನು ಆಚರಿಸುತ್ತಿರುವುದು ಸಂತಸದ ಸಂಗತಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಸೇವೆ ಮಾಡುವ ಭಾಗ್ಯ ಒದಗಿಬರಲಿ ಎಂದವರು  ಹಾರೈಸಿದರು. ಸಭಾಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ  ಎಡ್ವಿನ್ ಪ್ರಸನ್ನ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಂ|ಫಾ| ಜೆ.ಬಿ. ಕ್ರಾಸ್ತಾ, ವಂ|ಫಾ| ಮೆಕ್ಸಿಮ್ ನೊರೊನ್ಹಾ, ವಂ|ಫಾ| ಅನಿಲ್ ಕೆನ್ಯುಟ್ ಡಿ.ಮೆಲ್ಲೊ, ಸಂಸ್ಥಾಪಕ ಆಧ್ಯಕ್ಷರಾದ ವಾಲ್ಟರ್ ನೊರೊನ್ಹಾ ,  ರಿಚಡರ್್ ಮಿನೇಜಸ್, ಕೇಂದ್ರೀಯ ಸಮಿತಿಯ ಆಧ್ಯಕ್ಷಿಣಿಯಾದ ಶ್ರೀಮತಿ ಪ್ಲಾವಿಯಾ ಡಿ ಸೋಜ , ಜಾನ್ ಸಾಲೆತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಡ್ವಿನ್ ಪ್ರಸನ್ನ ಸ್ವಾಗತಿಸಿದರು.  ಜೆಮ್ಸ್ ಮಾಟರ್ಿಸ್ ವಂದಿಸಿದರು. ವಿಕ್ಟರ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *