ಬಂಟ್ವಾಳ ; ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ದೇವಳದ ಮುಂಭಾಗ ಹರಿಯುವ ನೇತ್ರಾವತಿ ನದಿಯಲ್ಲಿ ಶುಕ್ರವಾರ ತೇಲಾಡುತ್ತಿದ್ದ ತ್ಯಾಜ್ಯ ವಸ್ತು, ಕಸ ಕಡ್ಡಿಗಳು, ತಂಪು ಪಾನೀಯದ ಬಾಟ್ಲಿಗಳು ಶನಿವಾರ ನದಿ ತೀರದುದ್ದಕ್ಕೂ ಸಂಗ್ರಹವಾಗಿ ನಿಂತಿದೆ. ಶುಕ್ರವಾರ ಸುರಿದ ಮಳೆಯಿಂದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದರಿಂದಾಗಿ ಮಧ್ಯಭಾಗದಲ್ಲಿ ತೇಲಾಡುತ್ತಿದ್ದಂತ ತ್ಯಾಜ್ಯ,ಕಸ ಕಡ್ಡಿಗಳು,ಪ್ಲಾಸ್ಟಿಕ್ ಬಾಟ್ಲಿಗಳು ತೀರದಲ್ಲಿ ಬಂದು ನಿಂತಿದ್ದು,ಇದನ್ನು ಗಮನಿಸಿದವರು ಕೈಗೆಟಕಿದ ವಸ್ತುಗಳನ್ನು ನೀರಿನಿಂದ ಹೆಕ್ಕಿಮೇಲಕ್ಕಾಕಿದ್ದಾರೆ.3 (1)

ಕೆಲ ತ್ಯಾಜ್ಯವಸ್ತು,ಬಾಟ್ಲಿಗಳು ಹರಿಯುತ್ತಿದ್ದ ನೀರಿನಲ್ಲಿ ತೇಲಾಡಿ ಮುಂದಕ್ಕೆ ಚಲಿಸಿ ಕಲ್ಲುಬಂಡೆ ,ಪೊದೆಯಲ್ಲಿ ಸಿಲುಕಿಕೊಂಡಿದೆ.ಸರಪಾಡಿ ಡ್ಯಾಂನಿಂದ ಹೆಚ್ಚುವರಿ ನೀರನ್ನು ಹರಿಯಬಿಟ್ಟರೆ,ಇವೆಲ್ಲವೂ ತುಂಬೆ ವೆಂಟೆಡ್ ಡ್ಯಾಂ ನಲ್ಲಿ ಸಂಗ್ರಹವಾಗುವ ಸಾಧ್ತತೆ ಇದೆ.ಇದೀಗ ಸರಪಾಡಿ ಡ್ಯಾಂನಿಂದಲೂ ಹೆಚ್ಚುವರಿ ನೀರು ಹೊರಬಿಡುವುದನ್ನು ಸ್ಥಗಿತಗೊಳಿಸಲಾಗಿದೆ ತಿಳಿದು ಬಂದಿದೆ.ಶುಕ್ರವಾರ ಮಾಹಿತಿ ತಿಳಿದು ಮುಖ್ಯಾಧಿಕಾರಿ ಸುಧಾಕರ್ ಖುದ್ದಾಗಿ ನೇತ್ರಾವತಿ ನದಿ ಒಡಲಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದಾರೆ.ನಿಬ್ಬೆರಗಾಗಿದ್ದಾರೆ.ಆದರೆ ಯಾರ ಮೇಲೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ.

ಬೆಕ್ಕಿಗೆ ಗಂಟೆ ಕಟ್ಟವವರ್ಯಾರು?:ಇಲ್ಲಿ ಈ ವಿಚಾರದಲ್ಲಿ ಬೆಕ್ಕಿಗೆ ಗಂಟೆ ಕಟ್ಟವವರ್ಯಾರು ಎಂಬುದೆ ಪ್ರಮುಖ ಪ್ರಶ್ನೆ ಉದ್ಬವಿಸಿದೆ.ಬಡ್ಡಕಟ್ಟೆ ಕಿರುಸೇತುವೆಯಡಿ ಕೊಳಚೆ ನೀರು ನೇತ್ರಾವತಿಗೆ ಹರಿಯುವುದು,ತ್ಯಾಜ್ಯವಸ್ತು ಎಸಯುವುದು,ಪುರಸಭಾವ್ಯಾಪ್ತಿಯಲ್ಲಿ ಸಂಗ್ರಹಿಸಿದ ಕಸವನ್ನು ಇಲ್ಲೆ ಗುಡ್ಡೆ ಹಾಕುವುದು ಎಲ್ಲಾ ಮಾಹಿತಿ ಪುರಸಭೆಗಿದೆ.ಅಂತಹವರಿಗೆ ಕನಿಷ್ಟ ಎಚ್ಚರಿಕೆ ನೊಟೀಸ್ ಜಾರಿಮಾಡುವ ಧೈರ್ಯವನ್ನು ಪುರಸಭಾಡಳಿತವಾಗಲಿ,ಅಧಿಕಾರಿವರ್ಗ ಮಾಡಿಲ್ಲ ಎಂಬುದು ಬಹಿರಂಗಸತ್ಯ.ನೇತ್ರಾವತಿಗೆ ಕೂಳಚೆನೀರು ಇಲ್ಲಿಮಾತ್ರವಲ್ಲ ಸುಮಾರು ೧೮ ಕಡೆಯಲ್ಲಿ ನೇತ್ರಾವತಿ ಒಡಲು ಸೇರುತ್ತಿದೆ.

ಈಬಗ್ಗೆ ಶನಿವಾರ ತುಂಬೆ ವೆಂಟೆಡ್ ಡ್ಯಾಂ ಪರಿಶೀಲನೆಗಾಗಮಿಸಿದ ಶಾಸಕ ಜೆ.ಅರ್.ಲೋಬೋರವರ ಗಮನಸೆಳೆದ ಪತ್ರಕರ್ತರಿಗೆ ಈನೀರನ್ನು ಶುದ್ದೀಕರಿಸಿಯೇ ಪೂರೈಸಲಾಗುತ್ತಿದೆ.ಪುರಸಭೆಗೆ ಈ ಕುರಿತು ಜಿಲ್ಲಾಧಿಕಾರಿಯವರು ಕ್ರಮಕ್ಕೆ ಸೂಚನೆ ನೀಡಿದ್ದಾರೆ ಎಂದರು.ಅದರೆ ಪುರಸಭೆ ನಾಮ್ಕಾವಾಸ್ತೆ ಎಂಬಂತೆ ಕೆಲ ವಸತಿ ಸಂಕೀರ್ಣಗಳಿಗೆ ನೊಟೀಸ್ ಜಾರಿಗೊಳಿಸಿದ್ದು, ಹೊರತು ಕಟ್ಟು ನಿಟ್ಟಿನ ಕ್ರಮಕೈಗೊಂಡ ಉದಾಹರಣೆ ಇಲ್ಲ.

By Suddi9

Leave a Reply

Your email address will not be published. Required fields are marked *