• ಬಂಟ್ವಾಳ: ಕನ್ನಡದ ಕಲ್ಹಣ ನೀರ್ಪಾಜೆ ಭೀಮಭಟ್ಟ ಟ್ರಸ್ಟ್ ಮತ್ತು ನೀರ್ಪಾಜೆ ಭೀಮಭಟ್ಟ ಅಭಿಮಾನಿ ಬಳಗ ಬಂಟ್ವಾಳ ಇದರ ವತಿಯಿಂದ ಎ. 12ರಂದು ಬಿ.ಸಿ.ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆಯುವ ಕನ್ನಡದ ಕಲ್ಹಣ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲು ಪ್ರಶಸ್ತಿ ವಿಜೇತ ಸಾಹಿತಿ  ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರಿಗೆ ಅವರ ಮನೆಯಲ್ಲಿ ಆಮಂತ್ರಣ ನೀಡಲಾಯಿತು.BTW_APL8_9

  • ಟ್ರಸ್ಟ್‍ನ ಅಧ್ಯಕ್ಷ ಬಿ. ತಮ್ಮಯ್ಯ, ಕಾರ್ಯದರ್ಶಿ ಕೆ. ಮೋಹನ್‍ರಾವ್, ಕೋಶಾಧಿಕಾರಿ ಎಸ್.ಗಂಗಾಧರ ಭಟ್, ಹಾಗೂ ರಾಂಗಣೇಶ್ ಪ್ರಭು ಹಾಜರಿದ್ದರು.

    ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ದೀಪಪ್ರಜ್ವಲನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಲಿದ್ದು, ಪೊಳಲಿ ಶ್ರೀ ರಾಮಕೃಷ್ಣ ತಪೋವನದ  ವಿವೇಕಾ ಚೈತನ್ಯನಂದ ಸ್ವಾಮೀಜಿ  ದಿನೇಶ್ ಶೆಟ್ಟಿ ಅಳಿಕೆ, ವೆಂಕಟೇಶ್ವರ ಭಟ್, ಪುಂಡಿಕಾೈ ಗಣಪಯ್ಯ ಭಟ್ ಭಾಗವಹಿಸಲಿದ್ದಾರೆ.

By Suddi9

Leave a Reply

Your email address will not be published. Required fields are marked *