ಬಂಟ್ವಾಳ :ತಾಲೂಕಿನ ಕಾವಳ ಪಡೂರು ಗ್ರಾಮದ ಮಧ್ವ ಎಂಬಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕೋಳಿ ಅಂಕಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಗುರುವಾರ ರಾತ್ರಿ ಧಾಳಿ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದ 28 ಮಂದಿಯನ್ನು ಬಂಧಿಸಿ 23ಕೋಳಿಗಳನ್ನು ವಶ ಪಡಿಸಿದ್ದಾರೆ.ಖಚಿತ ವತ೯ಮಾನದ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ನಾಗೇಶ್ ಐಪಿಎಸ್ ಮತ್ತು ಸಿಬ್ಬಂದಿಗಳು ಈ ಧಾಳಿ ಕಾಯಾ೯ಚರಣೆ ನಡೆಯಿಸಿದ್ದಾರೆ.
ಕೋಳಿ ಅಂಕಕ್ಕೆ ಬಳಸಿದ್ದ ಶಾಮಿಯಾನ, 30 ,ಪ್ಲಾಸ್ಟಿಕ್ ಕುಚಿ೯ಗಳು, ಪಣವಾಗಿಟ್ಟಿದ್ದ ನಗದು ರೂ 13,085, 4 ಕಾರುಗಳು, 5 ಆಟೋ ರಿಕ್ಷಾ, 22 ಮೋಟಾರು ಬೈಕ್ ಗಳನ್ನು ವಶಪಡಿಸಲಾಗಿದೆ.
