ಬಂಟ್ವಾಳ: ಇಲ್ಲಿನ ಗೋಳ್ತಮಜಲು ಯುವಶಕ್ತಿ ಸಂಘ ನೆಟ್ಲ ಇದರ ನೂತನ ಅಧ್ಯಕ್ಷರಾಗಿ ಧನಂಜಯ ಕುಲಾಲ್ ಆಯ್ಕೆಯಾದರು. ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಪ್ರವೀಣ್ ಕುಲಾಲ್, ಕುಡಬೆಟ್ಟು, ಕಾರ್ಯದರ್ಶಿಯಾಗಿ ಭರತ್ ಕುಲಾಲ್, ಕೋಶಾಧಿಕಾರಿಯಾಗಿ ಚೇತನ್ ಕುಲಾಲ್ ಆಯ್ಕೆಗೊಂಡರು.
