ಮೂಡುಬಿದಿರೆ: ಶ್ರೀ ಧವಲಾ ಕಾಲೇಜಿನ ಹೆರಿಟೇಜ್ ಕ್ಲಬ್ನ ಆಶ್ರಯದಲ್ಲಿ ಎಂಬ ವಿಷಯದ ಕುರಿತು ಮಂಗಳೂರು ವಿವಿ ಮಟ್ಟದ ಒಂದು ದಿನದ ವಿಚಾರ ಸಂಕಿರಣವು ಕಾಲೇಜಿನ ಕಾನ್ಫರೆನ್ಸ್ ಹಾಲ್ನಲ್ಲಿ ಶನಿವಾರ ನಡೆಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ.ಬಿ ಅವರು ವಿಚಾರ ಸಂಕಿರಣವನ್ನು ಉದ್ಗಾಟಿಸಿ ಮಾತನಾಡಿ ಡ್ರಾವಿಡ ಭಾಷೆಯಲ್ಲಿ ಒಂದಾಗಿರುವ ತುಳು ಭಾಷೆಯು ಕನ್ನಡ, ತೆಲುಗು, ಮಲಯಾಳಂ ಭಾಷೆಗಳಿಗೆ ಸೀನಿಯರ್ ಭಾಷೆಯಾಗಿದೆ. ತುಳುನಾಡಿನ ಸಂಸ್ಕøತಿ, ಭಾಷೆ ಮತ್ತು ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿಯು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶ್ರಮಿಸುತ್ತಿದೆ. ದ.ಕ ಜಿಲ್ಲೆಯ 20 ಶಾಲೆ, ಕಾಲೇಜುಗಳಲ್ಲಿ ಸುಮಾರು 956 ವಿದ್ಯಾರ್ಥಿಗಳು ಈಗಾಗಲೇ ತುಳು ಭಾಷೆಯನ್ನು ಕಲಿಯುತ್ತಿದ್ದಾರೆ. ತುಳುಭಾಷೆಯನ್ನು ಕಲಿಯಲು ಶಾಲಾ ಮಟ್ಟದಲ್ಲಿ ಆರಂಭಿಸುವ ಅಪೇಕ್ಷೆ ಮತ್ತು ಆಸಕ್ತಿ ಇದ್ದರೆ ಅಕಾಡೆಮಿಯ ಮಆರಂಭಿಸಲು ಸಹಕಾರ ನೀಡುವುದಾಗಿ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೋ.ಎಂ. ರವೀಶ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಸನ್ಮಾನ : ದೈವ ನರ್ತಕ ಸುರೇಶ್ ಪರವ ಮರೋಡಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ರ ಸಞಮಕಿರಂಸಿದ್ದರು. ಹೆರಿಟೇಜ್ ಕ್ಲಬ್ನ ಸಂಚಾಲಕ ಸುದೀಪ್ ಸ್ವಾಗತಿಸಿದರು. ಅಭಿನಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನವೀನ್ ವಂದಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಡಾ.ಶ್ರೀಶ ಕುಮಾರ್ ಅವರು ಧಾರ್ಮಿಕ ಪರಂಪರೆ, ಪ್ರೋ.ಟಿ.ಮುರ್ಗೇಶಿ ತುಳುನಾಡಿನ ಪ್ರಾಗಿತಿಹಾಸ ಹಾಗೂ ದಯಾನಂದ ಕತ್ತಲ್ ಸಾರ್ ಜಾನಪದ ಪರಂಪರೆ ಎಂಬ ವಿಷಯಗಳ ಕುರಿತು ಮಾತನಾಡಿದರು.
