ಮೂಡುಬಿದಿರೆ: ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಮಾ. 29ರಿಂದ ಏ. 7ರ ವರೆಗೆ ಶ್ರೀರಾಮ ನವಮಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.
ಮಾ. 29 ಧ್ವಜಾರೋಹಣದೊಂದಿಗೆ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಪ್ರತಿದಿನ ವಿಶೇಷ ಪೂಜೆ, ಪಲ್ಲಕಿ ಉತ್ಸವ, ವೈವಿಧ್ಯಮಯ ವಾಹನೋತ್ಸವ ನಡೆಯಲಿದೆ. ಏ. 5ರಂದು ಶ್ರೀರಾಮ ನವಮಿಯಂದು ಮಧ್ಯಾಹ್ನ 12.06ಕ್ಕೆ ಶ್ರೀರಾಮ ಜನ್ಮೋತ್ಸವ, ರಾತ್ರಿ ಪುಷ್ಪರಥೋತ್ಸವ ಹಾಗೂ ಏ. 6ರಂದು ಮನ್ಮಹಾರಥೋತ್ಸವ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಪ್ರತಿದಿನ ಸಂಜೆ 6ರಿಂದ ಶಿರಸಿ ನಾರಾಯಣದಾಸರಿಂದ ಹರಿಕಥೆ, ಏ. 5ರ ಸಂಜೆ 5.30ರಿಂದ ಬಾಲಕಲಾವಿದೆ ಅನ್ವಿತಾ ಕೊಪ್ಲು ಅವರಿಂದ ಭಕ್ತಿ ಸಂಗೀತ ಮತ್ತು ಬೆಳಗಾವಿ ನಿರ್ಮಲಾ ಪ್ರಕಾಶ್ ಅವರಿಂದ ಹಿಂದೂಸ್ಥಾನಿ ಸಂಗೀತ ಕಛೇರಿ ಹಾಗೂ ಏ. 6ರ ಸಂಜೆ 6ರಿಂದ ಅಶ್ವತ್ಥಪುರ ಅಣ್ಣಿ ಸೇರಿಗಾರ ಬಳಗದವರಿಂದ ಸ್ಯಾಕ್ಸೊಫೋನ್ ವಾದನ, 6.30ರಿಂದ ಬೆಂಗಳೂರು ಸೂರ್ಯ ಕಲಾವಿದರಿಂದ `ಭಸ್ಮಾಸುರ ಮೋಹಿನಿ’ ಮತ್ತು `ದಶಾವತಾರ’ ನೃತ್ಯರೂಪಕ ಮತ್ತು ರಾತ್ರಿ 9ರಿಂದ ಅಶ್ವತ್ಥಪುರ ಎಸ್. ಭೋಜರಾಜನ್ ಬಳಗದವರಿಂದ ನಾದಸ್ವರ ವಾದನ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

