29 bajpe 3

29 bajpe 1
ಬಜ್ಪೆ: `ಮೊಗರು ಗ್ರಾಮ ಕುಕ್ಕಟ್ಟೆ ಎಂಬಲ್ಲಿಗೆ ಕಳೆದ ಹಲವಾರು ತಿಂಗಳಿನಿಂದ ನೀರು ಬರ್ತಾ ಇಲ್ಲ, ಒಂದು ವಾರ ಬಂದರೆ ಮತ್ತೊಂದು ವಾರ ಬರುವುದಿಲ್ಲ. ನೀರು ಬಂದರೂ ಒಂದು ಕೊಡಪಾನ ಸಿಗುವುದೇ ಕಷ್ಟ. ಮುಂದೆಯೂ ಇದೇ ರೀತಿ ನೀರು ಬರದೇ ಇದ್ದರೆ ಪಂಚಾಯತ್ನವರ ಹೆಸರು ಹೇಳಿಕೊಂಡು ಹಗ್ಗ ತೆಗೆದುಕೊಳ್ಳುತ್ತೇವೆ’ ಎಂದು ಗ್ರಾಮಸ್ಥರು ಬೆದರಿಕೆ ಒಡ್ಡಿದರು.
ಇದು ಗಂಜಿಮಠ ಗ್ರಾಮ ಪಂಚಾಯತ್ನ ಸಭಾಭವನದಲ್ಲಿ ನಿನ್ನೆ ಗುರುವಾರ ನಡೆದ ಗ್ರಾಮಸಭೆಯಲ್ಲಿ ನೀರಿಲ್ಲದೆ ಬವಣೆ ಪಡುವ ಗ್ರಾಮಸ್ಥರು ಒಡ್ಡಿದ ನೇರ ಬೆದರಿಕೆ ಇದಾಗಿತ್ತು.
ಕಳೆದ ಹಲವಾರು ತಿಂಗಳಿನಿಂದ ನೀರೇ ಬರ್ತಾ ಇಲ್ಲ. ನಮ್ಮ ಮೇಲೆ ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ. ಗೇಟ್ಬಾಲ್ ಅನ್ನು ಯಾರೂ ತಿರುಗಿಸುತ್ತಿದ್ದಾರೆ. ಮುಂದೆಯೂ ಹೀಗೆಯೇ ನಡೆದರೆ ನಾವು ಏನು ಮಾಡಬೇಕು ಎಂದು ಮೊಗರು ಗ್ರಾಮದ ಮಹಿಳಾ ಗ್ರಾಮಸ್ಥರು ಪಂ. ಆಡಳಿತ ಸಿಬ್ಬಂದಿಯನ್ನು ಪ್ರಶ್ನೆಯಲ್ಲೇ ಚಚ್ಚಿದರು.
ಒಂದು ವಾರದಲ್ಲೀ ಬೋರ್ವೆಲ್ ರಿಪೇರಿ: ಇದಕ್ಕೆ ಉತ್ತರಿಸಿದ ಪಂಚಾಯತ್ ಅರ್ಧಕ್ಷ ಜಿ. ಪುಂಲೀಕ ಕಾಮತ್ ಇನ್ನು ಕೇವಲ ಒಂದು ವಾರದಲ್ಲಿ ಬೋರ್ವೆಲ್ ತೋಡುತ್ತೇವೆ. ಇದಕ್ಕಾಗಿ ಸ್ಥಳಪರಿಶೀಲನೆ ನಡೆಸುತ್ತೇವೆ ಎಂದು ಗ್ರಾಮಸ್ಥರನ್ನು ಸಮಧಾನಿಸಿದರು.
ಗಾಂಧಿನಗರದಲ್ಲೂ ನೀರಿಲ್ಲ: ಗಂಜಿಮಠದ ಗಾಂಧಿನಗರದಲ್ಲಿ ನೀರಿಲ್ಲದೆ ಬವಣೆ ಪಡುತ್ತಿದ್ದೇವೆ. ಪೈಪ್ಲೈನ್ ಹದಗೆಟ್ಟಿದೆ. ಪಂಪ್ ಹಾಳಾಗಿದೆ. ನೀರು ಬಿಡುವವ ಅವನ ಸಮಯಕ್ಕೆ ತಕ್ಕಂತೆ ನೀರು ಬಿಡುತ್ತಾನೆ. ಇಲ್ಲದಿದ್ದರೆ ಬಿಡುವುದೇ ಇಲ್ಲ. ಕಳೆದ ವರ್ಷವೂ ಇದೇ ವಿಷಯವನ್ನು ಪಂ.ನಲ್ಲಿ ಪ್ರಸ್ತಾಪಿಸಿದ್ದೆವು. ಆದರೆ ಮೂರು ದಿನದಲ್ಲಿ ಭೇಟಿಕೊಟ್ಟು ಸರಿಪಡಿಸುತ್ತೇನೆ ಎಂದು ಪಂ. ಅಧ್ಯಕ್ಷರು ಹೇಳಿದ್ದರು. ಆದರೆ ಅವರು ಭೇಟಿ ಕೊಡಲೇ ಇಲ್ಲ ಎಂದು ತನ್ನ ಆಕ್ರೋಶವನ್ನು ಗ್ರಾಮಸ್ಥರು ಹೊಹಾಕಿದರು.
ವ್ಯವಸ್ಥಾಪನ ಪತ್ರ ಅಗತ್ಯ: ರಾಜೀವ ಗಾಂಧಿ ವಸತಿ ಯೋಜನೆಯಡಿಯಲ್ಲಿ 1 ಲಕ್ಷ 20 ಸಾವಿರ ರೂ. ವಸತಿಗೆ ಸಾಲ ಸಿಗುತ್ತದೆ. 250 ರಿಂದ 700 ಚ.ಅಡಿಯ ಸುಮಾರು ನಾಲ್ಕು ಲಕ್ಷದ ಮನೆ ಕಟ್ಟಬಹುದು. ಆದರೆ ಅದಕ್ಕೆ ಸ್ವಂತ ಜಾಗವಿರಬೇಕಾಗಿದ್ದು ತನ್ನ ರಕ್ತ ಸಂಬಂಧಿಕರು ತನ್ನ ಹೆಸರಲ್ಲಿ ಮನೆಕಟ್ಟಬೇಕಾದರೆ ಜಾಗ ಹೊಂದಿರುವವರ ವ್ಯವಸ್ಥಾಪನ ಪತ್ರ ಅಗತ್ಯ ಎಂದು ಗ್ರಾಮಾಭಿವೃದ್ಧಿ ಅಧಿಕಾರಿ ಜಿ. ಸದಾನಂದ ಮಾಹಿತಿ ನೀಡಿದರು.
ಮಳಲಿ ಪ್ರೌಢ ಶಾಲೆಯ ಕಂಪ್ಯೂಟರ್ ಹಾಳಾಗಿದೆ:
ಗ್ರಾಮಸಭೆಯಲ್ಲಿ ಪ್ರಶ್ನೆ ಕೇಳಿದ ಗ್ರಾಮಸ್ಥರು ಸರಕಾರಿ ಪ್ರೌಢ ಶಾಲೆ ಮಳಲಿಯಲ್ಲಿ ಕಂಪ್ಯೂಟರ್ ಹಾಳಾಗಿ ಒಂದು ವರ್ಷದ ಮೇಲಾಗಿದೆ. ಆದರೆ ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ ಎಂದಾಗ ಇದಕ್ಕೆ ಉತ್ತರಿಸಲು ಪಂಚಾಯತ್ನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಇರಲಿಲ್ಲ. ಇದರಿಂದ ಕುಪಿತರಾದ ಗ್ರಾಮಸ್ಥರೊಬ್ಬ ಶಿಕ್ಷಣ ಇಲಾಖೆಯಿಂದ ಸಮಸ್ಯೆಯನ್ನು ಆರಿಸಲು ಯಾರೂ ಬಂದಿಲ್ಲ,ಇದರಿಂದ ಸಮಸ್ಯೆ ಹೇಗೆ ಬಗೆಹರಿಯಲು ಸಾಧ್ಯ ಎಂದಾಗ ಪಂ. ಅಧ್ಯಕ್ಷ ಈ ಸಮಸ್ಯೆಯನ್ನು ಸಂಬಂಧಪಟ್ಟವರಿಗೆ ಮುಟ್ಟಿಸುತ್ತೇವೆ ಎಂದು ಹೇಳಿದರು.
ಒಟ್ಟಿನಲ್ಲಿ ಗ್ರಾಮಸಭೆ ಕಳೆದ ವರ್ಷದ ಸಮಸ್ಯೆಗಳೇ ಪ್ರತಿಧ್ವನಿಸಿದವು ಎನ್ನಬಹುದು.
ಗ್ರಾಮಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ವಿವಿಧ ಯೋಜನೆಗಳ ತಾಲೂಕು ಪಂ. ಸದಸ್ಯರ ಅನುದಾನ. ಜಿ.ಪಂ. ಸದಸ್ಯರ ಅನುದಾನ, ಕ್ರಿಯಾ ಯೋಜನೆಗಳ ಆಯ್ಕೆಯ ಬಗ್ಗೆ ಹಾಗೂ ಉದ್ಯೋಗ ಖಾತರಿ ಯೋಜನೆ ಬಗೆಗಿನ ಮಾಹಿತಿ ನೀಡಲಾಯ್ತು. ಗ್ರಾಮಸಭೆಯಲ್ಲಿ ಪಶು ಸಂಗೋಪನಾ ಇಲಾಖೆಯ ನಿದರ್ೇಶಕರು, ಅಧ್ಯಕ್ಷ ಪುಂಟಲೀಕ ಕಾಮತ್, ಉಪಾಧ್ಯಕ್ಷೆ ಮಾಲತಿ ಎಂ., ಪಂ. ಕಾರ್ಯದಶರ್ಿ ಸಂಜೀವ ಪೂಜಾರಿ, ವಿವಿಧ ಇಲಾಕೆಯ ವಿವಿಧ ಅಧಿಕಾರಿಗಳು, ಪಂ, ಸದಸ್ಯರು, ಹಲವಾರು ಮಂದಿ ಗ್ರಾಮಸ್ಥರು ಉಪಸ್ಥಿರಿದ್ದರು.

 

By suddi9

Leave a Reply

Your email address will not be published. Required fields are marked *