DSC08804
ಬಜ್ಪೆ: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಜೆಟ್ ಏರ್ ವೇಸ್ ವಿಮಾನದಲ್ಲಿ ಉತ್ತರ ಪ್ರದೇಶದ ವ್ಯಕ್ತಿಯೋರ್ವ ಮಲೇಶಿಯಾ ದೇಶದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಮಂಗಳವಾರ ಬೆಳಗ್ಗಿನ ಜಾವ ನಡೆದಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಉತ್ತರಪ್ರದೇಶ ರಾಜ್ಯದ ಬರೇಲಿ ಎಂಬಲ್ಲಿನ ಅಂಕುರ್ ಅಗವರ್ಾಲ್(36) ಎಂದು ಗುರುತಿಸಲಾಗಿದೆ. ದೂರು ನೀಡಿದ ಯುವತಿ ಮಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾಥರ್ಿನಿ ಎಂದು ತಿಳಿದುಬಂದಿದೆ.
ಜೆಟ್ ಏರ್ವೇಸ್ ವಿಮಾನದ ಪ್ರಯಾಣಿಸುತ್ತಿದ್ದ ಮಲೇಶಿಯಾದಯುವತಿಯ ಪಕ್ಕದಲ್ಲೇ ಅಂಕುರ್ ಅಗವರ್ಾಲ್ಗೆ ಸೀಟ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ವಿಮಾನ ಬಜ್ಪೆ ವಿಮಾನ ನಿಲ್ದಾಣದಲ್ಲಿ ನಿಂತ ನಂತರ ಅದರಿಂದ ಹೊರಬಂದ ಯುವತಿ ಒಂದೇ ಸಮನೆ ಅತ್ತಿದ್ದಾಳೆ. ಆಗ ವಿಮಾನ ಸಿಬ್ಬಂದಿ ವಿಚಾರಿಸಿದಾಗ ತನ್ನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ತನಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾಳೆ.
ನಿಲ್ದಾಣದಿಂದ ಬಹುದೂರ ಕ್ರಮಿಸಿದ್ದ ಅಂಕುರ್ನನ್ನು ನಿಲ್ದಾಣದ ಅಧಿಕಾರಿಗಳು ಫೋನ್ ಮಾಡಿ ವಾಪಾಸ್ ಕರೆಸಿ ವಿಚಾರಿಸಿದಾಗ ಆರೋಪಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾನೆ. ಈ ಪ್ರಕರಣವನ್ನು ಬಜ್ಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ದೂರು ನೀಡಿದ ಯುವತಿ ತನ್ನ ಪಕ್ಕದಲ್ಲಿದ್ದ ಯುವಕ ತನ್ನ ಪಕ್ಕದ ಸೀಟಿನಲ್ಲೇ ಕುಳಿತಿದ್ದು ನಿದ್ದೆ ಬಂದವನಂತೆ ನಟಿಸಿ ತನ್ನ ಮೈ ಮೇಲೆ ಕೈ ಹಾಕಿದ್ದಾನೆ ಎಂದು ದೂರು ಸಲ್ಲಿಸಿದ್ದಾಳೆ. ಆದರೆ ಅಂಕುರ್ ತನ್ನ ಕೃತ್ಯವನ್ನು ಒಪ್ಪದೆ ತನಗೆ ನಿದ್ದೆ ಬಂದಿತನಗೇನೂ ತಿಳಿದಿಲ್ಲ ಎಂದು ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ.
ಬಂಧಿತ ಆರೋಪಿ ಅಂಕುರ್ ಅಗವರ್ಾಲ್ ಮಣಿಪಾಲ್ ಆರೋಗ್ಯ ಸಂಸ್ಥೆಯ ಬೆಂಗಳೂರಿನ ಆಸ್ಪತ್ರಯೊಂದರಲ್ಲಿ ಕೆಲಸ ಮಾಡತ್ತಿದ್ದು ಬೆಂಗಳೂರಲ್ಲಿ ವಾಸವಾಗಿದ್ದಾನೆ. ಅಲ್ಲದೆ ಈತನಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಆಡಿಟಿಂಗ್ಗೆಂದು ಮಂಗಳೂರಲ್ಲಿರುವ ಮಣಿಪಾಲ ಆರೋಗ್ಯ ಸಂಸ್ಥೆಗೆ ಆಗಮಿಸಿದ್ದ. ಈತನನ್ನು ವೈದ್ಯಕೀಯ ತಪಾಸಣೆಗೆಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ತಪಾಸಣೆ ನಡೆಸಿದ ನಂತರ ಈತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ

By suddi9

Leave a Reply

Your email address will not be published. Required fields are marked *