ಬಂಟ್ವಾಳ:ಕಾವಳಪಡೂರು ಗ್ರಾ.ಪಂ.ವ್ಯಾಪ್ತಿಯ ಕಾಡಬೆಟ್ಟು ಕೆಳಗಿನ ವಗ್ಗದಲ್ಲಿ ಗ್ರಾ.ಪಂ.ಸದಸ್ಯೆ ಸುಜಾತ ಅವರ ಮನೆ ಬೆಂಕಿ ಆಕಸ್ಮಿಕದಿಂದ ಸುಟ್ಟು ಹೋಗಿದ್ದು ಲಕ್ಷಾಂತರ ರೂ.ನಷ್ಟ ವಾದ ಘಟನೆ ಗುರುವಾರ ಸಂಭವಿಸಿದೆ.ಘಟನೆಯಿಂದಾಗಿ ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳು,ಪೀಠೋಪಕರಣಗಳು,ಬಟ್ಟೆಬರೆ ಹಾಗೂ ಆಹಾರ ವಸ್ತುಗಳು ಮತ್ತು ಅಮೂಲ್ಯ ದಾಖಲೆ ಪತ್ರಗಳು ಸುಟ್ಟು ಹೋಗಿದೆ.ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.IMG-20170323-WA0011

IMG-20170323-WA0012

IMG-20170323-WA0013

ಕಂದಾಯ ಅಧಿಕಾರಿಗಳು ಮನೆಗೆ ಭೇಟಿ ನೀಡಿ ನಷ್ಟದ ವಿವರ ಪಡೆದಿದ್ದಾರೆ.ಘಟನೆ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

By suddi9

Leave a Reply

Your email address will not be published. Required fields are marked *