ಬಂಟ್ವಾಳ: ವಿದ್ಯೆಯ ಜೊತೆಗೆ ಕೌಶಲ್ಯ ಅಭಿವೃದ್ಧಿಯಾಗದ ಆ ಶಿಕ್ಷಣಕ್ಕೆ ಒಂದು ಸಂಪೂರ್ಣ ಅರ್ಥ ಸಿಕ್ಕಿದಂತೆ. ವಿದ್ಯೆಯ ಜೊತೆಗೆ ವಿಮರ್ಶೆ, ಪರಾಮರ್ಶೆ ಹಾಗೂ ಸಹಕಾರ ಮನೋಭಾವ ಬೆಳೆಯಬೇಕು. ಅಂತಹ ಶಿಕ್ಷಣ ಸಿಕ್ಕಾಗ ವಿದ್ಯಾರ್ಥಿಯು ಜೀವನ ಪಥ ಸಾಗುತ್ತಿದೆ ಎಂದು ಐ ಎ ಎಸ್ ಅಧಿಕಾರಿ ಡಾ| ಜಿ.ಸಿ.ಪ್ರಕಾಶ್ ಹೇಳಿದರು.
ಅವರು ಕಲ್ಲಡ್ಕ ಶ್ರೀ ರಾಮ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.ವೇದಿಕೆಯಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಬಟ್ ಕಲ್ಲಡ್ಕ, ತಮಿಳುನಾಡಿನ ಎಮ್. ಉದಯಕುಮಾರ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‍ಕಟ್ಟೆ ಸ್ವಾಗತಿಸಿ, ವಂದಿಸಿದರು.
